ಚಾಕು ಮೊಂಡಾಗಿದ್ರೆ ಹೀಗೆ ಹರಿತಗೊಳಿಸಿ

ಅಡುಗೆ ಮಾಡುವ ಕೆಲಸ ವೇಗವಾಗಿ ಆಗಬೇಕೆಂದರೆ ಅಲ್ಲಿ ಚಾಕುಗಳ ಕೆಲಸ ಬಹಳ ಮುಖ್ಯವಾದದ್ದು. ಚಾಕು ಹರಿತವಾಗಿರದೆ ಮೊಂಡಾಗಿದ್ದರೆ, ತರಕಾರಿ, ಹಣ್ಣುಗಳು ಹಾಗೂ ಇನ್ನಿತರ ಗಟ್ಟಿ ಪದಾರ್ಥಗಳನ್ನು ಕತ್ತರಿಸಲು ಸಾಧ್ಯವಾಗುವುದಿಲ್ಲ. ಮೊಂಡಾದ ಕತ್ತಿಗಳನ್ನು ಕೆಲ ಸುಲಭ ವಿಧಾನಗಳ ಮೂಲಕ ಮನೆಯಲ್ಲೇ ಹರಿತಗೊಳಿಸಬಹುದು.

* ಮೊಂಡಾಗಿರುವ ಚಾಕುಗಳನ್ನು ಚೂಪುಗೊಳಿಸಲು ಮನೆಯಲ್ಲಿ ಸಣ್ಣ ಓರೆಗಲ್ಲು, ಕಬ್ಬಿಣ, ಇಟ್ಟಿಗೆ ಅಥವಾ ಚಾಕು ಚೂಪುಗೊಳಿಸುವ ಸಾಧನವನ್ನು ಇಟ್ಟುಕೊಳ್ಳುವುದು ಒಳಿತು.

* ಒಂದು ಕಬ್ಬಿಣದ ತುಂಡನ್ನು ನೀರಿನಲ್ಲಿ ಚೆನ್ನಾಗಿ ತೊಳೆಯಿರಿ ನಂತರ ಅದನ್ನು ಬಿಸಿಲಿನಲ್ಲಿ ಅರ್ಧ ಗಂಟೆ ಒಣಗಲು ಬಿಡಿ. ಅದು ಮುಟ್ಟಲು ಬಿಸಿಯಾದ ತಕ್ಷಣ ಚಾಕುವಿನ ಮೊಂಡಾದ ಭಾಗವನ್ನು ಕಬ್ಬಿಣದ ತುಂಡಿನ ಮೇಲೆ ಚೆನ್ನಾಗಿ ಉಜ್ಜಿದರೆ ಚಾಕು ಹರಿತವಾಗುತ್ತದೆ. ಹೀಗೆ ಮಾಡುವಾಗ ಸಣ್ಣ ಬೆಂಕಿಯ ಕಿಡಿಗಳು ಬರುತ್ತವೆ. ಆಗ ಸ್ವಲ್ಪ ಹುಷಾರಾಗಿರಿ.

* ಮೊಂಡಾದ ಚಾಕುವಿನ ಭಾಗವನ್ನು ಗ್ರಾನೈಟ್‌ ಕಲ್ಲಿನ ಮೇಲೆ 20 ಸೆಕೆಂಡುಗಳ ಕಾಲ ಮೇಲಿಂದ ಕೆಳಕ್ಕೆ ಮತ್ತು ಕೆಳಗಿನಿಂದ ಮೇಲಕ್ಕೆ ಚೆನ್ನಾಗಿ ಉಜ್ಜಿದರೆ ಚಾಕು ಹರಿತವಾಗುತ್ತದೆ. ಹೀಗೆ ಮಾಡುವಾಗ ಸಣ್ಣ ಬೆಂಕಿಯ ಕಿಡಿಗಳು ಬರುತ್ತವೆ ಆಗ ಸ್ವಲ್ಪ ಎಚ್ಚರದಿಂದ ಇರಿ.

* ಚಾಕುವನ್ನು ಹರಿತಗೊಳಿಸಿದ ನಂತರ ಬೆಚ್ಚಗಿನ ಸಾಬೂನು ಬೆರೆಸಿದ ನೀರಿನಲ್ಲಿ ಅದ್ದಿ. 15 ನಿಮಿಷದ ನಂತರ ಅದನ್ನು ಒಂದು ಕಪ್‌ ನೀರು ಮತ್ತು ಅರ್ಧ ಕಪ್‌ ಬಿಳಿ ವಿನೆಗರ್‌ ಮಿಶ್ರಣಕ್ಕೆ ಹಾಕಿ. ಹೀಗೆ ಮಾಡುವುದರಿಂದ ಚಾಕುಗಳನ್ನು ಹೆಚ್ಚು ಕಾಲ ಉಪಯೋಗಕ್ಕೆ ಬರುವಂತೆ ಹಾಗೂ ಹೆಚ್ಚು ತುಕ್ಕು ಹಿಡಿಯದಂತೆ ತಡೆಯಬಹುದು.

* ಇಟ್ಟಿಗೆಯನ್ನು ಸಹ ಚಾಕುವನ್ನು ಹರಿತಗೊಳಿಸಲು ಉಪಯೋಗಿಸಬಹುದು. ಹೆಚ್ಚು ಮೊಂಡಾದ ಚಾಕುವನ್ನು ಹರಿತಗೊಳಿಸಲು ಚಾಕು ಹರಿತಗೊಳಿಸುವ ಸಾಧನವನ್ನು ಖರೀದಿಸುವುದು ಸೂಕ್ತ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read