ಬೆಂಗಳೂರು: RSS ನೋಂದಣಿ ಮಾಡಿದರೆ ಆರೋಪಗಳಿಂದ ಮುಕ್ತವಾಗಬಹುದು” ಇದು ಧರ್ಮಗುರುವೊಬ್ಬರ ಆಗ್ರಹಪೂರ್ವಕ ಸಲಹೆ. ಕಾನೂನು, ಸಂವಿಧಾನದ ಮಾತು ಕೇಳದ RSS, ಧರ್ಮಗುರುಗಳ ಮಾತನ್ನಾದರೂ ಗೌರವಿಸಿ ನೋಂದಣಿ ಮಾಡಿಕೊಳ್ಳಲಿ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಧರ್ಮಗುರುಗಳ ಮಾತು ಪಾಲಿಸುವ ಮೂಲಕ RSSನವರು ನೈಜ ಧರ್ಮಪಾಲಕರು ಎನ್ನುವುದನ್ನು ನಿರೂಪಿಸಲಿ! ದೇಶದ ಕಾನೂನು ಪಾಲಿಸದೆ ತಮ್ಮ ದೇಶಭಕ್ತಿ ನಕಲಿತನದಿಂದ ಕೂಡಿದ್ದು ಎನ್ನಿಸಿಕೊಂಡಿದೆ. ಧರ್ಮದ ವಿಚಾರದಲ್ಲೂ ಪ್ರಾಮಾಣಿಕತೆ ಇಲ್ಲದೆ ಡೋಂಗಿ ಧರ್ಮ ರಕ್ಷಕರಾಗಿದ್ದಾರೆ. “ದೇಶಕ್ಕೂ ನಿಷ್ಠರಲ್ಲ, ಧರ್ಮಕ್ಕೂ ನಿಷ್ಠರಲ್ಲ” ಎನ್ನುವ ಕಳಂಕದಿಂದ ಹೊರಬರಲು “ನೋಂದಣಿ”ಯೊಂದೇ ಪರಿಹಾರ ಎಂದು ಪ್ರಿಯಾಂಕ್ ಖರ್ಗೆ ಟ್ವೀಟ್ ಮಾಡಿದ್ದಾರೆ.

