HomeAstroಪುರುಷರು ಈ ನಿಯಮ ಪಾಲಿಸಿದರೆ ನಿಮ್ಮ ಮೇಲಿರುತ್ತೆ ಲಕ್ಷ್ಮಿ ಅನುಗ್ರಹ

ಪುರುಷರು ಈ ನಿಯಮ ಪಾಲಿಸಿದರೆ ನಿಮ್ಮ ಮೇಲಿರುತ್ತೆ ಲಕ್ಷ್ಮಿ ಅನುಗ್ರಹ

ಶಾಸ್ತ್ರದ ಪ್ರಕಾರ ಹೆಣ್ಣು ಮಕ್ಕಳು ಕೆಲವು ನಿಯಮಗಳನ್ನು ಪಾಲಿಸಿದರೆ ಲಕ್ಷ್ಮಿಯ ಅನುಗ್ರಹದಿಂದ ಶ್ರೀಮಂತರಾಗುತ್ತಾರೆ ಎನ್ನಲಾಗಿದೆ. ಅದೇ ರೀತಿ ಪುರುಷರು ಕೂಡ ಈ ನಿಯಮಗಳನ್ನು ಪಾಲಿಸಿದರೆ ಲಕ್ಷ್ಮಿ ಅನುಗ್ರಹ ದೊರೆಯುತ್ತದೆ. ಇದರಿಂದ ಅವರು ಹೋದಲ್ಲಿ ಹಣದ ಸುರಿಮಳೆ ಸುರಿಯುತ್ತದೆ ಎನ್ನಲಾಗಿದೆ.

ಪುರುಷರು ಗಡ್ಡ ಬೆಳೆಸುವುದು ಇತ್ತೀಚಿನ ದಿನಗಳಲ್ಲಿ ಒಂದು ಫ್ಯಾಶನ್ ಆಗಿದೆ. ಆದರೆ ಶಾಸ್ತ್ರದ ಪ್ರಕಾರ ಪುರುಷರು ಗಡ್ಡ ಬೆಳೆಸಿದರೆ ದಾರಿದ್ರ್ಯ ಬೆನ್ನು ಹತ್ತುತ್ತದೆಯಂತೆ. ಹಾಗಾಗಿ ಪುರುಷರು ಕ್ಲೀನ್ ಶೇವ್ ಮಾಡಿದರೆ ಉತ್ತಮ ಎನ್ನಲಾಗಿದೆ. ಆದರೆ ಪುರುಷರು ದೀಕ್ಷೆಯನ್ನು ತೆಗೆದುಕೊಂಡಾಗ, ಹೆಂಡತಿ ಗರ್ಭಧಾರಣೆಯಾದಾಗ, ವ್ರತ, ಪಾರಾಯಣ ಮಾಡುವಾಗ, ಯಜ್ಞ ಯಾಗಗಳು ನಡೆಯುವ ಸಮಯದಲ್ಲಿ ಪುರುಷರು ಗಡ್ಡ ಬೆಳೆಸಬಹುದು. ಆದರೆ ಎಲ್ಲಾ ದಿನಗಳಲ್ಲಿ ಗಡ್ಡ ಬೆಳೆಸಬಾರದು, ಇದರಿಂದ ಲಕ್ಷ್ಮಿದೇವಿ ನಿಮ್ಮ ಹತ್ತಿರ ಸುಳಿಯುವುದಿಲ್ಲ.

ಹಾಗೇ ಪುರುಷರು ಉಗುರನ್ನು ಬೆಳೆಸಬಾರದು. ಇದರಿಂದ ಆರೋಗ್ಯ ಮತ್ತು ಧನದ ಸಮಸ್ಯೆ ಕಾಡುತ್ತದೆ. ಅಲ್ಲದೇ ಸುಟ್ಟ ಬಟ್ಟೆಗಳನ್ನು ಪುರುಷರು ಧರಿಸಬಾರದು. ಇದರಿಂದ ಮಾಡುವ ಕೆಲಸದಲ್ಲಿ ಯಶಸ್ಸು ಸಿಗುವುದಿಲ್ಲ. ಹಾಗೇ ಪುರುಷರು ದೇಹವನ್ನು ಕ್ಲೀನ್ ಆಗಿಟ್ಟುಕೊಂಡು ಸುವಾಸನೆಯುಕ್ತ ದ್ರವ್ಯಗಳನ್ನು ಬಳಸಬೇಕು. ಕೊರಳಿನಲ್ಲಿ ಯಾವುದಾದರೂ ಮಾಲೆ (ರುದ್ರಾಕ್ಷಿ, ಕಮಲದ ಬೀಜದ ಮಾಲೆ, ಸ್ಪಟಿಕದ ಮಾಲೆ)ಗಳನ್ನು ಧರಿಸಿದರೆ ಒಳ್ಳೆಯದು ಎನ್ನಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular