ಮುಂಬೈ : 2023 ರ ಐಸಿಸಿ ವಿಶ್ವಕಪ್ ನ ಬ್ರಾಂಡ್ ಅಂಬಾಸಿಡರ್ ಆಗಿ ಶಾರುಖ್ ಖಾನ್ ನೇಮಕಗೊಂಡಿದ್ದಾರೆ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ICC) ಅಧಿಕೃತ ಪ್ರಕಟಣೆ ಹೊರಡಿಸಿದೆ.
2023 ವಿಶ್ವಕಪ್ ಪಂದ್ಯಾವಳಿಗಳು ಅಕ್ಟೋಬರ್ 5 ಮತ್ತು ನವೆಂಬರ್ 19 ರ ನಡುವೆ ನಡೆಯಲಿದ್ದು,10 ತಂಡಗಳು ಟೂರ್ನಿಯಲ್ಲಿ ಭಾಗವಹಿಸಲಿದ್ದು,. ಅಕ್ಟೋಬರ್ 8 ರಂದು ಆಸ್ಟ್ರೇಲಿಯಾ ವಿರುದ್ಧ ಭಾರತ ತನ್ನ ಅಭಿಯಾನವನ್ನು ಪ್ರಾರಂಭಿಸಲಿದೆ ಮತ್ತು ಅಕ್ಟೋಬರ್ 15 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾರತ-ಪಾಕಿಸ್ತಾನದ ಪಂದ್ಯ ನಡೆಯಲಿದೆ.
2023 ರ ಐಸಿಸಿ ವಿಶ್ವಕಪ್ ಟೂರ್ನಿಯ ಬ್ರಾಂಡ್ ಅಂಬಾಸಿಡರ್ ಆಗಿ ಶಾರೂಖ್ ಖಾನ್ ಅವರನ್ನು ನೇಮಕ ಮಾಡಲಾಗಿದ್ದು, ಐಸಿಸಿ ಅಧಿಕೃತ ಟ್ವೀಟರ್ ನಲ್ಲಿ ಪ್ರಕಟಿಸಿದೆ.
https://twitter.com/ICC/status/1681711950793670658?ref_src=twsrc%5Etfw%7Ctwcamp%5Etweetembed%7Ctwterm%5E1681711950793670658%7Ctwgr%5E4e6196ff95da638650989e4fbf5916b4acc25d89%7Ctwcon%5Es1_&ref_url=https%3A%2F%2Fwww.firstpost.com%2Fentertainment%2Fshah-rukh-khan-appointed-as-the-brand-ambassador-of-icc-world-cup-2023-poses-with-the-trophy-12890612.html