ವಿಮಾನದಲ್ಲಿ ಮೂತ್ರ ವಿವಾದ: ಡ್ರಿಂಕ್ಸ್ ಮಾಡುತ್ತಿದ್ದ ಕಾರಣ ಬಿಚ್ಚಿಟ್ಟ ಆರೋಪಿ

ನವದೆಹಲಿ: ನ್ಯೂಯಾರ್ಕ್‌ನಿಂದ ದೆಹಲಿಗೆ ತೆರಳುತ್ತಿದ್ದ ವಿಮಾನದಲ್ಲಿ ಪಾನಮತ್ತರಾಗಿ ಸಹ ಪ್ರಯಾಣಿಕರೊಬ್ಬರ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದ ಏರ್ ಇಂಡಿಯಾ ವಿಮಾನ ಪ್ರಯಾಣಿಕ ಶಂಕರ್ ಮಿಶ್ರಾ ಅವರನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿದ್ದು, ಜೈಲಿಗೆ ಅಟ್ಟಲಾಗಿದೆ.

ಇದೀಗ ಇದರ ತನಿಖೆ ಮುಂದುವರೆದಿದೆ. ತಾವು ಮದ್ಯಪಾನ ಮಾಡುತ್ತಿದ್ದುದು ಏಕೆ ಎಂದು ಶಂಕರ್ ಮಿಶ್ರಾ ಹೇಳಿಕೆ ನೀಡಿದ್ದಾರೆ. ಅದೇನೆಂದರೆ, ನನಗೆ ಸರಿಯಾಗಿ ನಿದ್ದೆ ಬರುತ್ತಿರಲಿಲ್ಲ. ಈ ಕಾರಣದಿಂದ ಡ್ರಿಂಕ್ಸ್ ಮಾಡುತ್ತಿದ್ದೆ. ವಿಮಾನದಲ್ಲಿ ಕೂಡ ನಿದ್ದೆ ಬರದ ಕಾರಣ, ಒಳ್ಳೆಯ ನಿದ್ರೆ ಪಡೆಯಲು ಮದ್ಯಪಾನ ಮಾಡಿದ್ದೆ ಎಂದಿದ್ದಾರೆ.

ಶಂಕರ್ ಮಿಶ್ರಾನನ್ನು ಜನವರಿ 21ರವರೆಗೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಇವರ ಜಾಮೀನು ಅರ್ಜಿಯನ್ನು ಜ. 11ರಂದು ನಡೆಯಲಿದೆ. ಅಂದಹಾಗೆ, ವೆಲ್ಸ್ ಫಾರ್ಗೋನಲ್ಲಿ ಕೆಲಸ ಮಾಡುತ್ತಿದ್ದ ಮಿಶ್ರಾ ಅವರನ್ನು ಸೇವೆಯಿಂದ ವಜಾಗೊಳಿಸಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read