HomeKarnatakaಇಂದು ನೆರಳೇ ಕಾಣಲ್ಲ..! ಖಗೋಳ ವಿಸ್ಮಯಕ್ಕೆ ಸಾಕ್ಷಿಯಾಗಲಿದೆ ಬೆಂಗಳೂರು| Zero Shadow Day

ಇಂದು ನೆರಳೇ ಕಾಣಲ್ಲ..! ಖಗೋಳ ವಿಸ್ಮಯಕ್ಕೆ ಸಾಕ್ಷಿಯಾಗಲಿದೆ ಬೆಂಗಳೂರು| Zero Shadow Day

ಬೆಂಗಳೂರು : ನೀವೆಲ್ಲೇ ಹೋದ್ರೂ ನಿಮ್ಮ ಪಕ್ಕದಲ್ಲಿ ನೆರಳು ಹಿಂಬಾಲಿಸುತ್ತದೆ ಅಲ್ಲವೇ?  ಆಗಸ್ಟ್ 18 ರ ಇಂದು ನಡೆಯಲಿರುವ ಆಸಕ್ತಿದಾಯಕ ವಿದ್ಯಮಾನದಲ್ಲಿ ನಿಮ್ಮ ನೆರಳು ನಿಕಟವಾಗಿ ಕಣ್ಮರೆಯಾಗುತ್ತದೆ. ಈ ಖಗೋಳ ಘಟನೆಯನ್ನು ಶೂನ್ಯ ನೆರಳು ದಿನ ಎಂದು ಕರೆಯಲಾಗುತ್ತದೆ. ಅಲ್ಲದೆ, ಶುಕ್ರವಾರದ ಘಟನೆಗೆ ಪ್ರತಿ ನಗರ ಅಥವಾ ಇಡೀ ಜಗತ್ತು ಸಾಕ್ಷಿಯಾಗುವುದಿಲ್ಲ. ಆದರೆ, ಬೆಂಗಳೂರು ಇದಕ್ಕೆ ಎರಡನೇ ಬಾರಿಗೆ ಸಾಕ್ಷಿಯಾಗಲಿದೆ.

ಶೂನ್ಯ ನೆರಳು ದಿನ ಎಂದರೇನು ?

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಶೂನ್ಯ ನೆರಳಿನ ದಿನದಂದು ಸೂರ್ಯ ನೇರವಾಗಿ ನಮ್ಮ ತಲೆಯ ಮೇಲೆ ಇರುತ್ತಾನೆ. ಈ ಸಮಯದಲ್ಲಿ ಭೂಮಿಯ ಮೇಲ್ಮೈಯಲ್ಲಿ ಯಾವುದೇ ನೆರಳು ಕಾಣಿಸದು. ಸೂರ್ಯನು ಆಕಾಶದಲ್ಲಿ ತನ್ನ ಅತ್ಯಧಿಕ ಎತ್ತರಕ್ಕೆ ತಲುಪುವಾಗ ಮತ್ತು ನಮ್ಮ ಮೇಲೆ ನೇರವಾಗಿ ಇರುವಾಗ ಈ ವಿದ್ಯಮಾನ ಸಂಭವಿಸುತ್ತದೆ. ದಕ್ಷಿಣಾಯನ ಹಾಗೂ ಉತ್ತರಾಯಣದಲ್ಲಿ ತಲಾ 1 ಬಾರಿ ಶೂನ್ಯ ನೆರಳಿನ ದಿನ ಬರುತ್ತದೆ.

ಇದು ಯಾವಾಗ ಸಂಭವಿಸುತ್ತದೆ ?

ಇಂದು, ಈ ಖಗೋಳ ವಿಸ್ಮಯವನ್ನು ಕಣ್ತುಂಬಿಕೊಳ್ಳಲು ಮಧ್ಯಾಹ್ನದ ಸಮಯದಲ್ಲಿ ಆಚೆ ಬನ್ನಿ. ಇದನ್ನು ಸೆರೆಹಿಡಿಯಲು ಮತ್ತು ವೀಕ್ಷಿಸಲು ನಿಖರವಾದ ಸಮಯ ಮಧ್ಯಾಹ್ನ 12.17 ಎಂದು ಹೇಳಲಾಗುತ್ತಿದೆ.

ಹಾಗಂತ ಬೆಂಗಳೂರಿನಲ್ಲಿ ಇದೇ ಮೊದಲ ಬಾರಿ ಶೂನ್ಯ ನೆರಳಿನ ದಿನ ಸಂಭವಿಸುತ್ತಿರುವುದ್ದಲ್ಲ. ಈ ವರ್ಷದ ಆರಂಭದಲ್ಲಿ ಏಪ್ರಿಲ್‌ನಲ್ಲಿ ಬೆಂಗಳೂರು ಶೂನ್ಯ ನೆರಳು ದಿನವನ್ನು ಆಚರಿಸಿತು. ಆಗಸ್ಟ್ 3 ರಂದು, ಹೈದರಾಬಾದ್ ನಲ್ಲಿ ಈ ವಿಸ್ಮಯ ಸಂಭವಿಸಿದೆ. ಮಧ್ಯಾಹ್ನ 12.23ರ ಸುಮಾರಿಗೆ ಸೂರ್ಯನು ನಿಖರವಾಗಿ ಮೇಲಿರುವಾಗ, ನೆರಳುಗಳು ನೆಲದ ಮೇಲೆ ಬೀಳಲಿಲ್ಲ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular