ಎಂಡಿ ಸಿರಾಜ್ ಮನೆಯಲ್ಲಿ ಹೈದರಾಬಾದಿ ಬಿರಿಯಾನಿ ರುಚಿ ಸವಿದ RCB ಆಟಗಾರರು

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರರು ತಂಡದ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಮನೆಯಲ್ಲಿ ಬಿರಿಯಾನಿ ರುಚಿ ನೋಡಿದ್ದಾರೆ.

ವಿರಾಟ್ ಕೊಹ್ಲಿ ಮತ್ತು ಕಂಪನಿಯನ್ನು ಹೈದರಾಬಾದ್‌ನ ಜೂಬಿಲಿ ಹಿಲ್ಸ್‌ ಫಿಲ್ಮ್ ನಗರ್‌ ನ ತಮ್ಮ ಹೊಸ ನಿವಾಸಕ್ಕೆ ಹೈದರಾಬಾದಿ ಬಿರಿಯಾನಿ ತಿನ್ನಲು ಸಿರಾಜ್ ಆಹ್ವಾನಿಸಿದ್ದಾರೆ. ಟ್ವಿಟ್ಟರ್ ಬಳಕೆದಾರರಿಂದ ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊ ವೈರಲ್ ಆಗಿದ್ದು, ಫಾಫ್ ಡು ಪ್ಲೆಸಿಸ್ ಮತ್ತು ಕೊಹ್ಲಿ ತಂಡದ ಇತರ ಸದಸ್ಯರೊಂದಿಗೆ ಸಿರಾಜ್ ಮನೆಗೆ ಪ್ರವೇಶಿಸುತ್ತಿರುವುದನ್ನು ಕಾಣಬಹುದಾಗಿದೆ.

RCB ಯ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್ ಚಿತ್ರಗಳನ್ನು ಹಂಚಿಕೊಂಡಿದ್ದು, “ಹೈದರಾಬಾದಿ ಬಿರಿಯಾನಿ ಸಮಯ! ಕಳೆದ ರಾತ್ರಿ ಮಿಯಾನ್ ಅವರ ಸುಂದರವಾದ ಹೊಸ ಮನೆಯಲ್ಲಿ ಹುಡುಗರು ಪಿಟ್‌ಸ್ಟಾಪ್ ತೆಗೆದುಕೊಂಡರು ಎಂದು ಬರೆಯಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read