ಹೈದರಾಬಾದ್‌ನ ನೆಹ್ರೂ ಮೃಗಾಲಯ ಉದ್ಯಾನವನಕ್ಕೆ ಸೌದಿ ಅರೇಬಿಯಾದ ರಾಜ ಕಳುಹಿಸಿದ್ದ ಚೀತಾ ಹೃದಯಾಘಾತದಿಂದ ಮೃತಪಟ್ಟಿದೆ. ’ಅಬ್ದುಲ್ಲಾಹ್’ ಹೆಸರಿನ ಈ 15 ವರ್ಷದ ಚೀತಾ ಸಾವಿಗೆ ಹೃದಯಾಘಾತವೇ ಕಾರಣವೆಂದು ಮರಣೋತ್ತರ ಪರೀಕ್ಷೆಯಲ್ಲಿ ತಿಳಿದು ಬಂದಿದೆ.
2012ರಲ್ಲಿ ಹೈದರಾಬಾದ್‌ನಲ್ಲಿ ಹಮ್ಮಿಕೊಳ್ಳಲಾಗಿದ್ದ ಸಿಓಪಿ11 ಶೃಂಗದಲ್ಲಿ ಭಾಗಿಯಾಗಲು ಆಗಮಿಸಿದ್ದ ವೇಳೆ ಸೌದಿ ರಾಜ Bandar Bin Saud Bin Mohammed Al Saud ಅವರು ಎರಡು ಜೋಡಿ ಆಫ್ರಿಕನ್ ಸಿಂಹಗಳು ಹಾಗೂ ಚೀತಾಗಳನ್ನು ನೀಡುವುದಾಗಿ ಘೋಷಿಸಿದ್ದರು.
ಸೌದಿ ಅರೇಬಿಯಾದ ರಾಷ್ಟ್ರೀಯ ವನ್ಯಜೀವಿ ಸಂಶೋಧನಾ ಕೇಂದ್ರದಿಂದ ಈ ಪ್ರಾಣಿಗಳು ಹೈದರಾಬಾದ್ ಮೃಗಾಲಯಕ್ಕೆ 2013ರಲ್ಲಿ ಆಗಮಿಸಿದ್ದವು. 2020ರಲ್ಲಿ ಅಬ್ದುಲ್ಲಾಹ್‌ನ ಸಂಗಾತಿ ಹೆಣ್ಣು ಚೀತಾ ಮೃತಪಟ್ಟಾಗಿನಿಂದ ಆತ ಒಬ್ಬನೇ ವಾಸಿಸುತ್ತಿದ್ದ. ’ಹಿಬಾ’ ಹೆಸರಿನ ಹೆಣ್ಣು ಚೀತಾ ತನ್ನ ಎಂಟನೇ ವಯಸ್ಸಿನಲ್ಲಿ ಮೃತಪಟ್ಟಿತ್ತು.
70 ವರ್ಷಗಳ ಹಿಂದೆಯೇ ದೇಶದಲ್ಲಿ ಚೀತಾಗಳು ಅಳಿದು ಹೋಗಿವೆ ಎಂದು ಘೋಷಿಸಲಾಗಿತ್ತು. ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ನಮೀಬಿಯಾದಿಂದ ಎಂಟು ಚೀತಾಗಳನ್ನು ಕರೆತಂದು ಮಧ್ಯ ಪ್ರದೇಶದ ಕುನ್ಹೋ ರಾಷ್ಟ್ರೀಯ ಉದ್ಯಾನದಲ್ಲಿ ಬಿಡಲಾಗಿದೆ. ಈ ಮೂಲಕ ಚೀತಾಗಳನ್ನು ಭಾರತದ ವನ್ಯಸಂಕುಲಕ್ಕೆ ಮರು ಪರಿಚಯಿಸುವ ಹೆಜ್ಜೆ ಇಡಲಾಗಿದೆ.
https://twitter.com/ians_india/status/1639865709806141440?ref_src=twsrc%5Etfw%7Ctwcamp%5Etweetembed%7Ctwterm%5E1639865709806141440%7Ctwgr%5E8ef1207730c6b4118e0efdbf49beb1d98e3a23a5%7Ctwcon%5Es1_&ref_url=https%3A%2F%2Fwww.freepressjournal.in%2Fviral%2Fhyderabad15-year-old-cheetah-gifted-by-saudi-prince-dies-of-heart-attack-at-nehru-zoological-park