HomeIndiaಉರಿ ಬಿಸಿಲಿನಲ್ಲಿ ಕೆಲಸ ಮಾಡುತ್ತಿದ್ದ ಸಂಚಾರೀ ಪೇದೆಗೆ ನೀರಿನ ಬಾಟಲಿ ಕೊಟ್ಟ ವ್ಲಾಗರ್‌

ಉರಿ ಬಿಸಿಲಿನಲ್ಲಿ ಕೆಲಸ ಮಾಡುತ್ತಿದ್ದ ಸಂಚಾರೀ ಪೇದೆಗೆ ನೀರಿನ ಬಾಟಲಿ ಕೊಟ್ಟ ವ್ಲಾಗರ್‌

ಅನ್ಯರ ಮೇಲೆ ಸಹಾನುಭೂತಿ ಹಾಗೂ ಕರುಣೆ ಹೊಂದುವುದು ಶ್ರೇಷ್ಠ ಚಿಂತನೆಗಳಲ್ಲಿ ಒಂದು. ಹೈದರಾಬಾದ್‌ನ ಉರಿ ಬಿಸಿಲಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಂಚಾರೀ ಪೊಲೀಸ್ ಪೇದೆಗಳಿಗೆ ನೀರಿನ ಬಾಟಲಿಗಳನ್ನು ನೀಡುತ್ತಿರುವ ವ್ಯಕ್ತಿಯೊಬ್ಬರನ್ನು ನೆಟ್ಟಿಗರು ಶ್ಲಾಘಿಸಿದ್ದಾರೆ.

ಇನ್‌ಸ್ಟಾಗ್ರಾಂ ಬಳಕೆದಾರ ನಿಖಿಲ್ ನಾಯಕ್‌ ಈ ವಿಡಿಯೋ ಶೇರ್‌ ಮಾಡಿದ್ದಾರೆ. ಹೈದರಾಬಾದ್‌ನ ಮೋಟೋ ವ್ಲಾಗರ್‌ ಆಗಿರುವ ನಿಖಿಲ್, ಬೈಕ್ ಚಾಲನೆ ಮಾಡುತ್ತಿದ್ದ ಸಂದರ್ಭದಲ್ಲಿ ರಸ್ತೆಯಲ್ಲಿ ಕಂಡ ಸಂಚಾರೀ ಪೊಲೀಸರಿಗೆ ನೀರಿನ ಬಾಟಲಿಗಳನ್ನು ಖರೀದಿಸಿ ಕೊಟ್ಟಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಈ ವಿಡಿಯೋವನ್ನು ಕೆಲ ವಾರಗಳ ಹಿಂದೆ ಶೇರ್‌ ಮಾಡಲಾಗಿದ್ದು, ಐದು ಲಕ್ಷ ವೀಕ್ಷಣೆಗಳನ್ನು ಕಂಡಿದೆ. ಅನೇಕರು ಈ ವಿಡಿಯೋಗೆ ಕಾಮೆಂಟ್ ಮಾಡಿದ್ದು, ವ್ಲಾಗರ್‌ನ ಔದಾರ್ಯತೆಯನ್ನು ಮೆಚ್ಚಿಕೊಂಡಿದ್ದಾರೆ.

https://youtu.be/bGXhv1QfgNo

For Latest News Updates, Join Our Whatsapp Community🚩
RELATED ARTICLES

Most Popular