ಬೆಂಗಳೂರು: ತನ್ನ ಸ್ನೇಹಿತೆಯೊಂದಿಗೂ ಸೆಕ್ಸ್ ಮಾಡುವಂತೆ ಪತ್ನಿ ಪತಿಗೆ ಪೀಡಿಸುತ್ತಿದ್ದು ಹೆಂಡತಿಯ ಹುಚ್ಚಾಟಕ್ಕೆ ಬೇಸತ್ತು ಪತಿ ಪೊಲೀಸ್ ಠಾಣೆ ಮೆಟ್ಟಿಲೇರಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ತನ್ನ ಪತ್ನಿ ಅಶ್ಲೀಲ ವಿಡಿಯೋಗಳನ್ನು ಕಳುಹಿಸಿ ವಿಕೃತವಾಗಿ ವರ್ತಿಸುತ್ತಿದ್ದು, ತನ್ನ ಸ್ನೇಹಿತಯರ ಜೊತೆ ಸೇರುವಂತೆ ಒತ್ತಾಯಿಸುತ್ತಿದ್ದಾಳೆ. ಅಲ್ಲದೇ ಮದುವೆಗೂ ಮುಂಚೆ ಇದ್ದ ಆಕೆಯ ಸಂಬಂಧಗಳ ಬಗ್ಗೆ ಪದೇ ಪದೇ ಹೇಳಿ ಕಿರಿಕಿರಿ ಉಂಟುಮಾಡುತ್ತಿದ್ದಾಳೆ. ತನ್ನ ಸ್ನೇಹಿತರ ಜೊತೆ ಕಾಲ ಕಳೆಯುವಂತೆ ಟಾರ್ಚರ್ ನೀಡುತ್ತಿದ್ದಾಳೆ ಎಂದು ಪತಿ ಪೊಲೀಸರಿಗೆ ದೂರು ನೀಡಿದ್ದಾನೆ.
ಕಿಡಿಯುವುದು, ಸ್ನೇಹಿತರ ಜೊತೆ ಕಾಲಹರಣ ಮಾಡುವುದು ಇದೆಲ್ಲ ಕಾಮನ್ ಎನ್ನುತ್ತಾ ಅಸಂಬದ್ಧವಾಗಿ ನಡೆದುಕೊಳ್ಳುತ್ತಿದ್ದು, ವಿಕೃತ ದೈಹಿಕ ಸಂಪರ್ಕಕ್ಕೆ ಒಪ್ಪದಿದ್ದಾಗ ಕಿರುಕುಳ ನೀಡಿ ಹಿಂಸಿಸುತ್ತಿದ್ದಾಳೆ ಎಂದು ನೊಂದ ಪತಿ ದೂರಿದ್ದಾರೆ.
ಇದೇ ವಿಚಾರವಾಗಿ ಈ ಹಿಂದೆ ಕೆಲವು ಸಲ ರಾಜಿಪಂಚಾಯ್ತಿ ಮಾಡಲಾಗಿತ್ತು. ಆದಾಗ್ಯೂ ಪತ್ನಿಯ ವಿಕೃತಿ ಕಡಿಮೆಯಾಗಿಲ್ಲ. ಇನ್ನಷ್ಟು ಹೆಚ್ಚಾಗಿದೆ. ಅಲ್ಲದೇ ಪತ್ನಿಗೆ ತಾನು ಕೊಡಿಸಿದ್ದ ಒಡವೆಗಳನ್ನು ವಾಪಸ್ ಕೊಡಿಸುವಂತೆಯೂ ಕೇಳಿದ್ದಾರೆ. ಅಮೃತಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

