HomeLive NewsBREAKING: ಪತ್ನಿಯನ್ನೇ ಕೊಲೆಗೈದು ಶವವನ್ನು ನದಿಗೆ ಬಿಸಾಕಿದ ಪತಿ: ಶಬರಿಮಲೆಯಿಂದ ವಾಪಸ್ ಬಂದ ದಿನವೇ ಕೃತ್ಯ

BREAKING: ಪತ್ನಿಯನ್ನೇ ಕೊಲೆಗೈದು ಶವವನ್ನು ನದಿಗೆ ಬಿಸಾಕಿದ ಪತಿ: ಶಬರಿಮಲೆಯಿಂದ ವಾಪಸ್ ಬಂದ ದಿನವೇ ಕೃತ್ಯ

ಹಾಸನ: ಪತಿ ಮಹಾಶಯನೊಬ್ಬ ಪತ್ನಿಯನ್ನೇ ಹತ್ಯೆಗೈದು ಶವವನ್ನು ಯಗಚಿ ಬಳಿ ನದಿಗೆ ಬಿಸಾಕಿರುವ ಘೋರ ಘಟನೆ ಹಾಸನದಲ್ಲಿ ನಡೆದಿದೆ.

ಹಾಸನ ಜಿಲ್ಲೆಯ ಯಡೂರು ಗ್ರಾಮದಲ್ಲಿ ಈ ಘಟನೆ ನಡೆದಿದೆ. ಕುಮಾರ್ ಪತ್ನಿಯನ್ನು ಕೊಲೆಗೈದು ಶವವನ್ನು ನದಿಗೆ ಬಿಸಾಕಿದ ಕಿರಾತಕ. ರಾಧಾ ಪತಿಯಿಂದ ಕೊಲೆಯಾದ ಪತ್ನಿ. ಹಲವು ವರ್ಷಗಳ ಹಿಂದೆಯೇ ಕುಮಾರ್ ಹಾಗೂ ರಾಧಾ ಮದುವೆಯಾಗಿದ್ದರು. ದಂಪತಿಗೆ 22 ವರ್ಷದ ಮಗ ಕೂಡ ಇದ್ದಾನೆ. ಕಳೆದ ನಾಲ್ಕು ವರ್ಷಗಳಿಂದ ಪತಿ, ಕ್ಷುಲ್ಲಕ ಕಾರಣಕ್ಕೆ ಜಗಳವಾಡುವುದು ಕಿರಿಕಿರಿ ಮಾಡುವುದು ಮಾಡುತ್ತಿದ್ದ. ಇತ್ತೀಚೆಗೆ ಕುಮಾರ್ ಎರಡನೇ ಮದುವೆಯಾಗಿದ್ದಾನೆ ಎಂದು ಮೊದಲ ಪತ್ನಿ ರಾಧಾಳಿಗೆ ಗೊತ್ತಾಗಿದೆ.

ಪತಿ ಎರಡನೇ ಮದುಯಾಗಿರುವ ವಿಷಯ ತಿಳಿದು ಆಘಾತಗೊಂಡ ರಾಧಾ, ಪತಿಯನ್ನು ಪ್ರಶ್ನಿಸಿದ್ದಾಳೆ. ಇದೇ ವೇಳೆ ಪತಿ ಕುಮಾರ್ ಶಬರಿಮಲೆಯಿಂದ ವಾಪಸ್ ಆಗಿದ್ದ. ಪತ್ನಿ ಎರಡನೇ ಮದುವೆಯನ್ನು ಪ್ರಶ್ನಿಸಿದ್ದಕ್ಕೆ ಇಬ್ಬರ ನಡುವೆ ಗಲಾಟೆಯಾಗಿದೆ. ಪತ್ನಿಯನ್ನು ಬರ್ಬರವಾಗಿ ಕೊಲೆಗೈದು ಕಂದಳ್ಳಿಬಳಿಯ ಯಗಚಿ ನದಿಗೆ ಪತ್ನಿಯ ಶವವನ್ನು ಬಿಸಾಕಿ ತೆರಳಿದ್ದಾನೆ. ಶಬರಿಮಲೆಯಿಂದ ಮನೆಗೆ ಬಂದವನೇ ಈ ಕೃತ್ಯವೆಸಗಿದ್ದಾನೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸದ್ಯ ಆರೋಪಿ ಪತಿಯನ್ನು ಪೊಲೀಸರು ಬಂಧಿಸಿ ತನಿಖೆ ನಡೆಸಿದ್ದಾರೆ. ಮೃತದೇಹವನ್ನು ನದಿಯಿಂದ ಹೊರತೆಗೆಯಲಾಗಿದ್ದು, ತನಿಖೆ ಮುಂದುವರೆದಿದೆ.

For Latest News Updates, Join Our Whatsapp Community🚩
RELATED ARTICLES

Most Popular