HomeKarnatakaಪತ್ನಿಯನ್ನು ಜನ ಹೀಯಾಳಿಸುವುದನ್ನು ಸಹಿಸಲಾಗದೇ ಆಕೆಯನ್ನೇ ಕೊಂದ ಪತಿ

ಪತ್ನಿಯನ್ನು ಜನ ಹೀಯಾಳಿಸುವುದನ್ನು ಸಹಿಸಲಾಗದೇ ಆಕೆಯನ್ನೇ ಕೊಂದ ಪತಿ

ಬೆಂಗಳೂರು: ಪತ್ನಿಯನ್ನು ಜನರು ಹೀಯಾಳಿಸುತ್ತಿರುವುದನ್ನು ಸಹಿಸಲಾಗದೇ ಆಕೆಯನ್ನೇ ಕೊಲೆಗೈದು ಬಳಿಕ ಪೊಲೀಸ್ ಠಾಣೆಗೆ ಬಂದು ಪತಿಮಹಾಶಯ ಶರಣಾಗಿರುವ ಘಟನೆ ಬೆಂಗಳೂರಿನ ವೈಟ್ ಫೀಲ್ಡ್ ನಲ್ಲಿ ನಡೆದಿದೆ.

ತಾರಾನಾಥ್ ಪತ್ನಿಯನ್ನೇ ಕೊಂದ ಆರೋಪಿ. ಮೂಲತ: ಮಂಗಳೂರಿನವನಾದ ತಾರಾನಾಥ್ ಬೆಂಗಳೂರಿನ ವೈಟ್ ಫೀಲ್ಡ್ ಬಳಿ ಪಾನಿಪುರಿ ಅಂಗಡಿ ನಡೆಸುತ್ತಿದ್ದ. ಆದರೆ ತಾರಾನಾಥ್ ಪತ್ನಿ ವಿರುದ್ಧ ಈ ಹಿಂದೆ ಮಂಗಳೂರಿನಲ್ಲಿ ಕಳ್ಳತನದ ಕೇಸ್ ದಾಖಲಾಗಿತ್ತು. ಹೀಗಾಗಿ ಜನರು ತಾರಾನಾಥ್ ಪತ್ನಿಯನ್ನು ಕಳ್ಳಿ ಕಳ್ಳಿ ಎಂದು ಹೀಯಾಳಿಸುತ್ತಿದ್ದರಂತೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇದನ್ನು ಸಹಿಸಲಾಗದೇ ಹಗ್ಗದಿಂದ ಪತ್ನಿಯ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾನೆ. ಬಳಿಕ ತಾನೂ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಆದರೆ ಧೈರ್ಯ ಸಾಲದೇ ನೇರವಾಗಿ ವೈಟ್ ಫೀಲ್ಡ್ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ. ಪ್ರಕರಣ ದಾಖಲಿಸಿಕೊಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular