ಪ್ರಿಯತಮನ ಜೊತೆ ಸೇರಿ ಸುಪಾರಿ ಕೊಟ್ಟು ಪತಿಯ ಕೊಲೆಗೈದ ಪತ್ನಿ: ಮಹಿಳೆ ಸೇರಿ ಐವರು ಆರೋಪಿಗಳು ಅರೆಸ್ಟ್

ಬೆಂಗಳೂರು: ಪ್ರಿಯತಮನ ಜೊತೆ ಸೇರಿ ಸುಪಾರಿ ಕೊಟ್ಟು ಪತಿಯನ್ನು ಕೊಲೆ ಮಾಡಿ ಏನೂ ಗೊತ್ತಿಲ್ಲ ಎಂಬಂತೆ ನಾಟಕವಾಡಿದ್ದ ಪತ್ನಿ ಸೇರಿ ಐವರು ಆರೋಪಿಗಳನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.

ಪತ್ನಿ ನಾಗಮ್ಮ ಸೇರಿ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಳ್ಳಾರಿ ಜಿಲ್ಲೆಯ ಸಿರಗುಪ್ಪ ತಾಲೂಕಿನ ಕರೂರು ಗ್ರಾಮದ ದಂಪತಿ ತಿಪ್ಪೇಶ್ ಹಾಗೂ ನಾಗಮ್ಮ ಬೆಂಗಳೂರಿನ ಬೋಗೇನಹಳ್ಳಿ ಕೆರೆ ಬಳಿಯ ಲೇಬರ್ ಶೆಡ್ ನಲ್ಲಿ ಗಾರ್ಡನರ್ ಕೆಲಸ ಮಾಡಿಕೊಂಡು ವಾಸವಾಗಿದ್ದರು. ದಂಪತಿಗೆ ಇಬ್ಬರು ಮಕ್ಕಳು ಕೂಡ ಇದ್ದಾರೆ. ಆದರೆ ಅಕ್ರಮ ಸಂಬಂಧ ಹೊಂದಿದ್ದ ನಾಗಮ್ಮ ಪ್ರಿಯಕರನ ಜೊತೆ ಸೇರಿ ಸುಪಾರಿ ಕೊಟ್ಟು ಅ.14ರಂದು ಬೋಗೇನಹಳ್ಳಿ ಕೆರೆ ಬಳಿಯ ನೀಲಗಿರಿ ತೋಪಿನಲ್ಲಿ ಪತಿಯ ಹತ್ಯೆ ಮಾಡಿಸಿದ್ದಳು.

ಕೆರೆ ಬಳಿ ತಿಪ್ಪೇಶ್ ಶವ ಕಂದ ಸ್ಥಳೀಯರು ನಾಗಮ್ಮಗೆ ತಿಳಿಸಿದ್ದರು. ಪತಿಯ ಶವದ ಮುಂದೆ ಕಣ್ಣೀರಿಟ್ಟು ಗೋಳಾಡಿದ್ದ ನಾಗಮ್ಮ ತನಗೇನು ಗೊತ್ತೆ ಇಲ್ಲ ಎಂಬಂತೆ ನಾಟಕವಾಡಿದ್ದಳು. ಪೊಲೀಸರು ಅನುಮಾನಗೊಂಡು ತಮ್ಮದೇ ಶೈಲಿಯಲ್ಲಿ ವಿಚಾರಣೆ ನಡೆಸಿದಾಗ ಕೊಲೆ ರಹಸ್ಯ ಬಯಲಾಗಿದ್ದು, ನಾಗಮ್ಮ ಸೇರಿದಂತೆ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read