ಪತಿಯ ಗುಟ್ಕಾ ಚಟಕ್ಕೆ ನೊಂದು ನೇಣಿಗೆ ಶರಣಾದ ಪತ್ನಿ

ಪತಿಯ ಗುಟ್ಕಾ ಚಟಕ್ಕೆ ಬೇಸತ್ತ ಪತ್ನಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಉತ್ತರಪ್ರದೆಶದ ಹಮೀರ್ ಪುರದಲ್ಲಿ ನಡೆದಿದೆ.

24 ವರ್ಷದ ಸಾರಿಕಾ ಮೃತ ಮಹಿಳೆ. ಜಲಾಲ್ ಪುರ ನಿವಾಸಿ ಸುಲಭ್ ನಾಮದೇವ್ ಎಂಬಾತನನ್ನು 2021ರಲ್ಲಿ ಪ್ರೀತಿಸಿ ವಿವಾಹವಾಗಿದ್ದಳು. ಆದರೆ ಪತಿ ಸುಲಭ್ ಗೆ ಗುಟ್ಕಾ ಜಗಿಯುವ ಚಟ. ಇದರಿಂದ ಬೇಸತ್ತಿದ್ದ ಪತ್ನಿ ಸಾರಿಕಾ ಸಾಕಷ್ಟು ಬಾರಿ ಗುಟ್ಕಾ ಸೇವಿದಂತೆ ಹೇಳಿದ್ದಳು.

ಇದೇ ವಿಚಾರವಾಗಿ ಹಲವುಬಾರಿ ಪತಿ-ಪತ್ನಿ ನಡುವೆ ಜಗಳವೂ ಆಗಿತ್ತು. ಕರ್ವಾ ಚೌತ್ ದಿನ ಪತಿಗಾಗಿ ಉಪವಾ ವ್ರತ ಮಾಡಿದ್ದ ಸಾರಿಕಾ, ಪೂಜೆಗೆಂದು ಸಿದ್ಧತೆ ಮಾಡಿಕೊಂಡಿದ್ದಳು. ಪೂಜೆ ದಿನವೂ ಪತಿ ಗುಟ್ಕಾ ಜಗಿಯುತ್ತಲೇ ಇರುವುದನ್ನು ಕಂಡು ಸಾರಿಕಾ ತಾಳ್ಮೆ ಕಳೆದುಕೊಂಡಿದ್ದಾಳೆ. ಇಬ್ಬರ ನಡುವೆ ಮತ್ತೆ ಜಗಳ ಶುವಾಗಿದೆ.

ಪೂಜೆ ಮುಗಿಸಿ ರಾತ್ರಿ ಊಟ ಮಾಡಿ ಎಲ್ಲರೂ ಮಲಗಿದೆ ಮೇಲೆ ಮನನೊಂದ ಸಾರಿಕಾ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಪತಿ ಬೆಳಿಗ್ಗೆ ಎದ್ದು ನೋಡಿದರೆ ಪತ್ನಿ ಫ್ಯಾನ್ ಗೆ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಳು.

ಜಲಾಲ್ ಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read