ಪತ್ನಿ ಹಾಗೂ ಮಾಜಿ ಪ್ರಿಯಕರನ ಖಾಸಗಿ ವಿಡಿಯೋ ಅಪ್ ಲೋಡ್ ಮಾಡುವುದಾಗಿ ಬೆದರಿಕೆ: ಪತಿ ವಿರುದ್ಧ FIR ದಾಖಲು

ಬೆಂಗಳೂರು: ಪತ್ನಿ ಹಾಗೂ ಆಕೆಯ ಮಾಜಿ ಪ್ರಿಯಕರನ ಜೊತೆಗಿನ ಖಾಸಗಿ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಹೇಳಿ ಪತಿಯೇ ಬೆದರಿಸುತ್ತಿದ್ದ ಘಟನೆ ಬೆಂಗಳೂರಿನ ಬ್ಯಾಡರಹಳ್ಳಿಯಲ್ಲಿ ನಡೆದಿದೆ.

26 ವರ್ಷದ ಮಹಿಳೆ ನೀಡಿದ ದೂರಿನ ಮೇರೆಗೆ ಮಹಿಳೆಯ ಪತಿ ಪ್ರಸನ್ನ ಎಂಬುವವರ ವಿರುದ್ಧ ಬ್ಯಾಡರಾಯನಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಆರೋಪಿ ಪ್ರಸನ್ನ, ಪತ್ನಿಗೆ ಕುಟುಂಬ ನಿರ್ವಹಣೆಗೂ ಸಹಕರಿಸದೇ ಕ್ರಿಕೆಟ್ ಬೆಟ್ಟಿಂಗ್ ಆಡುವುದು, ಕಂಠಪೂರ್ತಿ ಕುಡಿದು ಮನೆಗೆ ಬಂದು ಪತ್ನಿಗೆ ಹಿಂಸೆ ನೀಡುವುದು ಮಾಡುತ್ತಿದ್ದ. ಪತಿಯ ಕಿರುಕುಳ, ಹಿಂಸೆಗೆ ಬೇಸತ್ತಿದ್ದ ಮಹಿಳೆಗೆ ಮಾಜಿ ಪ್ರಿಯಕರ ಮತ್ತೆ ಸಿಕ್ಕಿದ್ದು, ಆತನೊಂದಿಗೆ ಸಂಕಷ್ಟ ತೋಡಿಕೊಂಡಿದ್ದಾರೆ. ಇಬ್ಬರ ನಡುವೆ ಸಲುಗೆ ಬೆಳೆದು ಇಬ್ಬರೂ ತಮ್ಮ ಖಾಸಗಿ ಕ್ಷಣಗಳ ಫೋಟೋ, ವಿಡಿಯೋ ಮಾಡಿಟ್ಟುಕೊಂಡಿದ್ದರಂತೆ. ಇದನ್ನು ಪತ್ನಿಗೆ ಗೊತ್ತಾಗದಂತೆ ಆಕೆಯ ಮೊಬೈಲ್ ನಿಂದ ತನ್ನ ಮೊಬೈಲ್ ಗೆ ಕಳುಹಿಸಿಕೊಂಡ ಪತಿ ಪ್ರಸನ್ನ, ಸೋಷಿಯಲ್ ಮೀಡಿಯಾಗಳಲ್ಲಿ ವಿಡಿಯೋ, ಫೋಟೋ ಅಪ್ ಲೋಡ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಅಲ್ಲದೇ ಮಾಜಿ ಪ್ರಿಯಕರನಿಗೆ ಜೀವ ಬೆದರಿಕೆಯೊಡ್ಡಿದ್ದಾನಂತೆ. ಈ ಬಗ್ಗೆ ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಬ್ಯಾಡರಹಳ್ಳಿ ಪೊಲೀಸರು ತನಿಖೆ ನಡೆಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read