ನಿಧಿ ಆಸೆಗಾಗಿ ಬಾಲಕನನ್ನು ಅಪಹರಿಸಿ ನರಬಲಿ…! ಬಾಲಾಪರಾಧಿಗಳು ಅರೆಸ್ಟ್

ಮನುಷ್ಯರಿಗೆ ಹಣದ ಆಸೆ ಇರುತ್ತೆ ನಿಜ. ಅದಕ್ಕಾಗಿ ಕಷ್ಟಪಟ್ಟು ದುಡಿಯುವ ಮನಸ್ಥಿತಿ ಎಲ್ಲರಲ್ಲೂ ಇರೋಲ್ಲ. ಕೆಲವರು ಹಣದ ಆಸೆಗಾಗಿ ಕೊಲೆ ಮಾಡುವುದಕ್ಕೂ ಹಿಂದೇಟು ಹಾಕುವುದಿಲ್ಲ. ಈಗ ಇಂತಹದ್ದೇ ಒಂದು ಪ್ರಕರಣ ಗುಜರಾತ್‌ನ ದಾದಾ ಬಳಿಯಲ್ಲಿ ನಡೆದಿದೆ.

ನೋಡ್ತಿದ್ರೆ, ಮನುಷ್ಯನ ಮಾನಸಿಕ ಹಂತ ಯಾವ ಮಟ್ಟದಲ್ಲಿ ಇದೆ ಅನ್ನೋದಕ್ಕೆ ಇದು ಬೆಸ್ಟ್ ಎಕ್ಸಾಂಪಲ್. ಇಬ್ಬರು ಬಾಲಾಪರಾಧಿಗಳು, ಹಣದ ಆಸೆಗಾಗಿ ಮನೆಯ ಮುಂದೆ ಆಡುತ್ತಿದ್ದ 9 ವರ್ಷದ ಬಾಲಕನನ್ನ ಕಿಡ್ನ್ಯಾಪ್ ಮಾಡಿದ್ದಾರೆ.

ಇಷ್ಟೇ ಆಗಿದ್ದರೆ ಒಂದು ಮಾತಿತ್ತು. ಆದರೆ ಕಿಡ್ನ್ಯಾಪ್ ಮಾಡಿದ ನಂತರ ಆ ಬಾಲಕನನ್ನ ಕೊಲೆ ಮಾಡಿ ಪೀಸ್ ಪೀಸ್ ಮಾಡಿದ್ದಾರೆ. ಈಗ ಅದೇ ಬಾಲಕನ ಶವ ಗುಜರಾತ್ ರಾಜ್ಯದ ವಲ್ಸಾದ್ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ದಮಗಂಗಾ ಕಾಲುವೆಯಲ್ಲಿ ಪತ್ತೆಯಾಗಿದೆ. ತಕ್ಷಣವೇ ತನಿಖೆ ಆರಂಭಿಸಿದ ಪೊಲೀಸರು ಬುಡಕಟ್ಟು ಸಮುದಾಯದಕ್ಕೆ ಸೇರಿದ ಬಾಲಕನ ತಲೆ ಇಲ್ಲದ ಶವವನ್ನ ಪೋಸ್ಟ್ ಮಾರ್ಟ್‌೦ಗೆ ಕಳುಹಿಸಿ ಇಬ್ಬರು ಬಾಲಕರನ್ನ ಬಂಧಿಸಿದ್ದಾರೆ.

ದಾದ್ರಾ ಮತ್ತು ನಗರ ಹವೇಲಿ ಜಿಲ್ಲೆಯ ಸಯಾಲಿ ಗ್ರಾಮದಿಂದ ಬಾಲಕ ಡಿಸೆಂಬರ್ 29ರಿಂದ ನಾಪತ್ತೆಯಾಗಿದ್ದನು. ಈ ಕುರಿತು ಸಿಲ್ವಾಸ್ಸಾ ಪೊಲೀಸ್ ಠಾಣೆಯಲ್ಲಿ ಅಪಹರಣ ಪ್ರಕರಣ ದಾಖಲಾಗಿತ್ತು. ಬಾಲಕನನ್ನ ಎಷ್ಟೆ ಹುಡುಕಿದರೂ ಆತ ಸಿಕ್ಕಿರಲಿಲ್ಲ. ಕೊನೆಗೆ ಸಿಲ್ವಾಸ್ಸಾದಿಂದ 30 ಕಿಮೀ ದೂರದಲ್ಲಿರುವ ತಲೆ ಇಲ್ಲದ ದೇಹವೊಂದು ಪತ್ತೆಯಾಗಿದೆ. ಅಲ್ಲೇ ಪಕ್ಕದಲ್ಲೇ ಇದ್ದ ಕಾಲುವೆಯಲ್ಲಿ ಶವದ ಇತರೇ ಭಾಗಗಳು ಕೂಡ ಪತ್ತೆಯಾಗಿದ್ದವು. ಸೂಕ್ಷ್ಮವಾಗಿ
ಗಮನಿಸಿದಾಗ ಅಲ್ಲಿ ಧಾರ್ಮಿಕ ವಿಧಿ-ವಿಧಾನಗಳು ನಡೆದಿರುವ ಕುರುಹುಗಳು ಸಿಕ್ಕಿದ್ದವು.

ನಿಧಿ ಆಸೆಗಾಗಿ ಬಾಲಾಪರಾಧಿಯಿಬ್ಬರು 9 ವರ್ಷದ ಮಗುವನ್ನ ಡಿಸೆಂಬರ್ 29ರಂದು ಸಾಯಿಲಿ ಗ್ರಾಮದಿಂದ ಅಪಹರಣ ಮಾಡಿದ್ದಾರೆ. ಆತನನ್ನ ನರಬಲಿ ಕೊಡುವ ಉದ್ದೇಶದಿಂದಲೇ ಅಪಹರಣ ಮಾಡಿದ್ದು ತನಿಖೆ ವೇಳೆ ತಿಳಿದು ಬಂದ ವಿಷಯವಾಗಿದೆ. ಎಂದು ಪೊಲೀಸರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಈಗ ಈ ಬಾಲಾಪರಾಧಿಗಳನ್ನು ಕಸ್ಟಡಿಗೆ ತೆಗೆದುಕೊಂಡು ಆತನ ಮೇಲೆ ಎಫ್ಐಆರ್ ದಾಖಲು ಮಾಡಲಾಗಿದೆ. ಭಾರತೀಯ ಸಂಹಿತೆ 302, 201 ಮತ್ತು 120ಬಿಯನ್ನು ಸೇರಿಸಲಾಗಿದೆ. ಘಟನೆಗೆ ಬಳಸಲಾಗಿದ್ದ ಆಯುಧವನ್ನ ಕೂಡಾ ಪೊಲೀಸರು ವಶಪಡಿಸಿಕೊಂಡಿದ್ದಾರೆ. 9 ವರ್ಷದ ಬಾಲಕನನ್ನ ಕೊಲ್ಲಲು ಶೈಲೇಶ್ ಕೊಹೇರಾ (28) ಅನ್ನುವ ವ್ಯಕ್ತಿ ಸಹಾಯ ಮಾಡಿದ್ದು, ಬಂಧಿತ ಬಾಲಕ ಈ ವಿಷಯವನ್ನ ಬಹಿರಂಗಪಡಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಅವನನ್ನ ಸಹ ಈಗ ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read