ಬೆಂಗಳೂರು: ದುಬೈ, ಸೌದಿ ಅರೇಬಿಯಾಕ್ಕೆ ನಂದಿನಿ ತುಪ್ಪ ಈಗಾಗಲೇ ಮಾರಾಟ ಮಾಡಲಾಗುತ್ತಿದ್ದು, ಕೆಲವೇ ದಿನಗಳಲ್ಲಿ ಆಸ್ಟ್ರೇಲಿಯಾ, ಕೆನಡಾ ದೇಶಗಳಿಗೂ ಪೂರೈಸಲಾಗುವುದು. ಆಗಸ್ಟ್‌ನಲ್ಲಿ ಅಲ್ಲಿ ನಡೆಯುವ ಉತ್ಸವಕ್ಕೆ 3 ಸಾವಿರ ಟನ್‌ಗೆ ಬೇಡಿಕೆ ಬಂದಿದೆ ಎಂದು ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಬಿ. ಶಿವಸ್ವಾಮಿ ತಿಳಿಸಿದ್ದಾರೆ.
ತಿರುಪತಿ ದೇವಾಲಯಕ್ಕೆ ಈಗಾಗಲೇ 2000 ಮೆಟ್ರಿಕ್ ಟನ್ ನಂದಿನಿ ತುಪ್ಪ ಪೂರೈಕೆ ಮಾಡಲಾಗಿದೆ. ಹೆಚ್ಚುವರಿಯಾಗಿ 2000 ಮೆಟ್ರಿಕ್ ಟನ್ ತುಪ್ಪಕ್ಕೆ ಕಾರ್ಯಾದೇಶ ಬಂದಿದ್ದು, 500 ಮೆಟ್ರಿಕ್ ಟನ್ ತುಪ್ಪವನ್ನು ಪೂರೈಸಲಾಗಿದೆ ಎಂದು ಹೇಳಿದ್ದಾರೆ.
ರಾಜ್ಯ, ಹೊರ ರಾಜ್ಯ ಮಾತ್ರವಲ್ಲದೆ ಸೌದಿ ಅರೇಬಿಯಾ, ದುಬೈನಲ್ಲಿಯೂ ನಂದಿನಿ ಔಟ್ಲೆಟ್ ಗಳಿವೆ. ಆಸ್ಟ್ರೇಲಿಯಾ, ಕೆನಾಡಾದಿಂದ ಮೂರು ಸಾವಿರ ಟನ್ ತುಪ್ಪಕ್ಕೆ ಬೇಡಿಕೆ ಬಂದಿದೆ ಎಂದು ಹೇಳಿದ್ದಾರೆ.