HomeKarnatakaಕೆಲಸ ಕೊಡಿಸುವುದಾಗಿ ಹೇಳಿ ಯುವತಿಯನ್ನು ಮಂಚಕ್ಕೆ ಕರೆದ ರೈಲ್ವೆ ಕ್ಲರ್ಕ್: ಆರೋಪಿಯನ್ನು ಕೂಡಿಹಾಕಿ ಥಳಿಸಿದ ಸ್ಥಳೀಯರು

ಕೆಲಸ ಕೊಡಿಸುವುದಾಗಿ ಹೇಳಿ ಯುವತಿಯನ್ನು ಮಂಚಕ್ಕೆ ಕರೆದ ರೈಲ್ವೆ ಕ್ಲರ್ಕ್: ಆರೋಪಿಯನ್ನು ಕೂಡಿಹಾಕಿ ಥಳಿಸಿದ ಸ್ಥಳೀಯರು

ಹುಬ್ಬಳ್ಳಿ: ಯುವತಿಗೆ ಕೆಲಸ ಆಮಿಷವೊಡ್ಡಿ ಆಕೆಯನ್ನು ಮಂಚಕ್ಕೆ ಕರೆದ ರೈಲ್ವೆ ಇಲಾಖೆ ಕ್ಲರ್ಕ್ ನನ್ನು ಪೊಲೀಸರು ಬಂಧಿಸಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

ಹುಬ್ಬಳ್ಳಿಯ ರೈಲ್ವೆ ಇಲಾಖೆ ಕ್ಲರ್ ನದೀಂ ಎಂಬಾತ, ಯುವತಿಗೆ ಕೆಲಸದ ಅಮಿಷವೊಡ್ಡಿ ಲೈಂಗಿಕ ಕಿರುಕುಳ ನೀಡಿದ್ದಾಗಿ ಆರೋಪಿಸಲಾಗಿದೆ. ಕೆಲಸ ಬೇಕು ಎಂದರೆ ಮಂಚ ಏರಬೇಕು ಎಂದಿದ್ದಾನೆ. ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳ ಗೆಸ್ಟ್ ಹೌಸ್ ಗೆ ಬರುವಂತೆ ಯುವತಿಯನ್ನು ಕರೆದಿದ್ದಾನೆ. ಯುವತಿ ಸ್ಥಳೀಯರಿಗೆ ಮಾಹಿತಿ ನೀಡಿದ್ದರು.

ಈ ವೇಳೆ ಗೆಸ್ಟ್ ಹೌಸ್ ನಲ್ಲಿ ಸ್ಥಳೀಯರು ನದೀಂ ನನ್ನು ಹಿಡಿದು ಥಳಿ ಕೂಡಿಹಾಕಿ ಪೊಲಿಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಕೇಶ್ವಾಪುರ ಠಾಣೆ ಪೊಲೀಸರು ನದೀಂ ನನ್ನು ವಶಕ್ಕೆ ಪಡೆದಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular