ಬೆಂಗಳೂರು: ಜಾಗಿಂಗ್ ಮಾಡುತ್ತಿದ್ದ ಮಹಿಳೆಯರ ವಿಡಿಯೋ ರೆಕಾರ್ಡ್ ಮಾಡಿದ ಆರೋಪ ಕೇಳಿ ಬಂದಿದೆ. ಯುವಕನ ಕೃತ್ಯವನ್ನು ಪತ್ತೆ ಹಚ್ಚಿದ ಸಾರ್ವಜನಿಕರು ತರಾಟೆಗೆ ತೆಗೆದುಕೊಂಡಿದ್ದಾರೆ.
ಬೆಂಗಳೂರಿನ ಹೆಚ್ಎಸ್ಆರ್ ಲೇಔಟ್ ನಲ್ಲಿ ಘಟನೆ ನಡೆದಿದೆ. ನಿನ್ನೆ ಬೆಳಗ್ಗೆ ಎಂದಿನಂತೆ ಆಗರಕೆರೆಯ ಬಳಿ ಮಹಿಳೆ ವಾಕಿಂಗ್ ಮಾಡುತ್ತಿದ್ದರು. ಜಾಗಿಂಗ್ ಮಾಡುತ್ತಿದ್ದ ಮಹಿಳೆಯ ವಿಡಿಯೋವನ್ನು ಆರೋಪಿ ರೆಕಾರ್ಡ್ ಮಾಡಿದ್ದಾನೆ. ಕೂಡಲೇ ಇದನ್ನು ಕಂಡ ಮಹಿಳೆಯೊಬ್ಬರು ಯುವಕನನ್ನು ಪ್ರಶ್ನಿಸಿದ್ದಾರೆ. ಅಲ್ಲೇ ಇದ್ದ ಸ್ಥಳೀಯರಿಗೆ ಯುವಕರನ್ನ ಕೃತ್ಯದ ಬಗ್ಗೆ ಮಹಿಳೆ ತಿಳಿಸಿದ್ದಾರೆ. ಈ ವೇಳೆ ಯುವಕನನ್ನು ಹಿಡಿದು ಪರಿಶೀಲಿಸಿದಾಗ ಕೃತ್ಯ ಬೆಳಕಿಗೆ ಬಂದಿದೆ.
ಮೊಬೈಲ್ ನಲ್ಲಿ ಹಲವು ಮಹಿಳೆಯರ ವಿಡಿಯೋ ಇರುವುದು ಪತ್ತೆಯಾಗಿದೆ ಬಳಿಕ ಮಹಿಳೆ ಕಾಲಿಗೆ ಬಿದ್ದು ಆರೋಪಿ ಗೋಲ್ಡನ್ ಕುಮಾರ್ ಕ್ಷಮೆ ಕೇಳಿದ್ದಾನೆ. ಸದ್ಯ ಆರೋಪಿ ಗೋಲ್ಡನ್ ಕುಮಾರ್ ವಿರುದ್ಧ ಹೆಚ್ಎಸ್ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

