ಫ್ರಿಜ್‌ ಇಲ್ಲದೆಯೂ ಸೊಪ್ಪು ತಾಜಾವಾಗಿಡುವುದು ಹೇಗೆ…….? ಇಲ್ಲಿದೆ ಟಿಪ್ಸ್

ಸೊಪ್ಪುಗಳು ಫ್ರಿಜ್ ನಲ್ಲಿ ಇದ್ದರೆ ಮಾತ್ರ ತಾಜಾ ಆಗಿ ಉಳಿಯುತ್ತದೆ ಎಂದು ನೀವು ಭಾವಿಸಬೇಕಿಲ್ಲ. ಫ್ರಿಜ್‌ ಹೊರತಾಗಿಯೂ ಅದನ್ನು ಫ್ರೆಶ್ ಆಗಿ ಉಳಿಸಬಹುದು.

Contents
 ಕೊತ್ತಂಬರಿ ಸೊಪ್ಪಿನಲ್ಲಿ ಹಾಳಾಗಿರುವ ಎಲೆಗಳನ್ನು ಕಿತ್ತು ತೆಗೆಯಿರಿ. ಕಾಂಡ ಹಾಗೂ ಬೇರುಗಳನ್ನು ಕತ್ತರಿಸಿ ಸ್ವಚ್ಛಗೊಳಿಸಿ. ತೇವಾಂಶವಿಲ್ಲದ ಈ ಸೊಪ್ಪನ್ನು ಬಿಳಿ ಕಾಗದದಲ್ಲಿ ಸುತ್ತಿ ತಂಪಾದ ಜಾಗದಲ್ಲಿಡಿ. ಇದು ಕೆಲವು ದಿನಗಳ ತನಕ ಕೆಡದೆ ಫ್ರೆಶ್ ಆಗಿ ಉಳಿಯುತ್ತದೆ. ಹೀಗೆ ಸ್ವಚ್ಛಗೊಳಿಸಿದ ಸೊಪ್ಪನ್ನು ಪ್ಲಾಸ್ಟಿಕ್ ಪ್ಯಾಕೆಟ್ ನಲ್ಲಿ ಹಾಕಿ ರಬ್ಬರ್ ಬ್ಯಾಂಡ್ ಕಟ್ಟಿ ಮುಚ್ಚಿಟ್ಟರೂ ಒಂದೆರಡು ದಿನಗಳ ತನಕ ಉಳಿಯುತ್ತದೆ. ಪುದೀನ ಸೊಪ್ಪನ್ನು ಸ್ವಚ್ಛವಾಗಿ ತೊಳೆದು ಕಾಂಡವನ್ನು ಕತ್ತರಿಸಿ ತೆಗೆಯಿರಿ. ಹಾಳಾದ ಎಲೆಗಳನ್ನು ಕಿತ್ತೆಸೆಯಿರಿ. ಅಗಲವಾದ ಪಾತ್ರೆಗೆ ನೀರು ಹಾಕಿ ಸೊಪ್ಪಿನ ಕಾಂಡಗಳು ಮುಳುಗುವಂತೆ ಮಾಡಿ. ಮೇಲ್ಭಾಗಕ್ಕೆ ಒದ್ದೆ ಬಟ್ಟೆಯನ್ನು ಹಾಕಿ ಮುಚ್ಚಿ. ಹೀಗೆ ಮಾಡಿದರೆ ಪುದಿನಾ ಬಾಡುವುದಿಲ್ಲ.

 ಕೊತ್ತಂಬರಿ ಸೊಪ್ಪಿನಲ್ಲಿ ಹಾಳಾಗಿರುವ ಎಲೆಗಳನ್ನು ಕಿತ್ತು ತೆಗೆಯಿರಿ. ಕಾಂಡ ಹಾಗೂ ಬೇರುಗಳನ್ನು ಕತ್ತರಿಸಿ ಸ್ವಚ್ಛಗೊಳಿಸಿ. ತೇವಾಂಶವಿಲ್ಲದ ಈ ಸೊಪ್ಪನ್ನು ಬಿಳಿ ಕಾಗದದಲ್ಲಿ ಸುತ್ತಿ ತಂಪಾದ ಜಾಗದಲ್ಲಿಡಿ. ಇದು ಕೆಲವು ದಿನಗಳ ತನಕ ಕೆಡದೆ ಫ್ರೆಶ್ ಆಗಿ ಉಳಿಯುತ್ತದೆ. ಹೀಗೆ ಸ್ವಚ್ಛಗೊಳಿಸಿದ ಸೊಪ್ಪನ್ನು ಪ್ಲಾಸ್ಟಿಕ್ ಪ್ಯಾಕೆಟ್ ನಲ್ಲಿ ಹಾಕಿ ರಬ್ಬರ್ ಬ್ಯಾಂಡ್ ಕಟ್ಟಿ ಮುಚ್ಚಿಟ್ಟರೂ ಒಂದೆರಡು ದಿನಗಳ ತನಕ ಉಳಿಯುತ್ತದೆ.

 ಪುದೀನ ಸೊಪ್ಪನ್ನು ಸ್ವಚ್ಛವಾಗಿ ತೊಳೆದು ಕಾಂಡವನ್ನು ಕತ್ತರಿಸಿ ತೆಗೆಯಿರಿ. ಹಾಳಾದ ಎಲೆಗಳನ್ನು ಕಿತ್ತೆಸೆಯಿರಿ. ಅಗಲವಾದ ಪಾತ್ರೆಗೆ ನೀರು ಹಾಕಿ ಸೊಪ್ಪಿನ ಕಾಂಡಗಳು ಮುಳುಗುವಂತೆ ಮಾಡಿ. ಮೇಲ್ಭಾಗಕ್ಕೆ ಒದ್ದೆ ಬಟ್ಟೆಯನ್ನು ಹಾಕಿ ಮುಚ್ಚಿ. ಹೀಗೆ ಮಾಡಿದರೆ ಪುದಿನಾ ಬಾಡುವುದಿಲ್ಲ.

ಟೊಮೆಟೋ ಹಣ್ಣುಗಳನ್ನು ಕೂಡ ಫ್ರಿಜ್ಜಿನಲ್ಲಿ ಇಡಬೇಕಿಲ್ಲ. ಹಾಳಾಗದ ಗಾಯವಾಗದೆ ಇರುವ ಟೊಮೇಟೊ ಹಣ್ಣುಗಳನ್ನು ಒಂದಕ್ಕೊಂದು ತಾಕಿಕೊಳ್ಳದಂತೆ ಪ್ರತ್ಯೇಕವಾಗಿ ಇಟ್ಟರೆ ವಾರಗಳ ತನಕ ಇದನ್ನು ಸಂಗ್ರಹಿಸಬಹುದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read