ಪ್ರಸ್ತುತ ದಿನಗಳಲ್ಲಿ ಪ್ರತಿಯೊಬ್ಬರಿಗೂ ಆಧಾರ್ ಕಾರ್ಡ್ ಅತ್ಯಗತ್ಯ ದಾಖಲೆಯಾಗಿದೆ. ಇದರಲ್ಲಿರುವ ವಿವರಗಳು ಸರಿಯಾಗಿರುವುದು ಬಹಳ ಮುಖ್ಯ. ಮಾಹಿತಿ ತಪ್ಪಾಗಿದ್ದರೆ ಹಲವು ಅಡಚಣೆಗಳನ್ನು ಎದುರಿಸಬೇಕಾಗುತ್ತದೆ. ಆಧಾರ್‌ನಲ್ಲಿರುವ ವಿವರಗಳನ್ನು ತಿದ್ದುಪಡಿ ಮಾಡಿಕೊಳ್ಳಲು UIDAI ಅವಕಾಶ ನೀಡಿದೆಯಾದರೂ, ಕೆಲವು ಮಿತಿಗಳನ್ನು ವಿಧಿಸಿದೆ.
ಆಧಾರ್ ಕಾರ್ಡ್ ಪಡೆಯುವಾಗ ನಿಮ್ಮ ವಿವರಗಳು ತಪ್ಪಾಗಿ ದಾಖಲಾಗಿದ್ದರೆ ಅವುಗಳನ್ನು ಸರಿಪಡಿಸಿಕೊಳ್ಳುವುದು ಅನಿವಾರ್ಯ. ಇಲ್ಲದಿದ್ದರೆ ಕೆವೈಸಿ (KYC) ದೃಢೀಕರಣ ಪ್ರಕ್ರಿಯೆಯಲ್ಲಿ ನೀವು ತೊಂದರೆ ಅನುಭವಿಸಬಹುದು. ಒಂದೊಂದು ದಾಖಲೆಯಲ್ಲಿ ಒಂದೊಂದು ರೀತಿಯ ಮಾಹಿತಿ ಇದ್ದರೆ ಸಮಸ್ಯೆಗಳಾಗುತ್ತವೆ. ಈಗಿನ ಕಾಲದಲ್ಲಿ ಪ್ರತಿ ಕೆಲಸಕ್ಕೂ ಆಧಾರ್ ಕಡ್ಡಾಯವಾಗಿರುವುದರಿಂದ, ವಿವರಗಳನ್ನು ಅಪ್‌ಡೇಟ್ ಮಾಡಿಕೊಳ್ಳುವುದು ಭವಿಷ್ಯದಲ್ಲಿ ತೊಂದರೆಯಾಗದಂತೆ ಸಹಕರಿಸುತ್ತದೆ. ಆದರೆ, ಆಧಾರ್ ವಿವರಗಳನ್ನು ಅಪ್‌ಡೇಟ್ ಮಾಡಲು UIDAI ವಿಧಿಸಿರುವ ಮಿತಿಗಳು ಇಲ್ಲಿವೆ:
ಹೆಸರು ಮತ್ತು ಹುಟ್ಟಿದ ದಿನಾಂಕ ಎಷ್ಟು ಬಾರಿ ಬದಲಾಯಿಸಬಹುದು ?
ಆಧಾರ್ ಕಾರ್ಡ್‌ನಲ್ಲಿ ಹೆಸರು ಮತ್ತು ಹುಟ್ಟಿದ ದಿನಾಂಕಕ್ಕೆ ಸಂಬಂಧಿಸಿದಂತೆ UIDAI ಕೆಲವು ಷರತ್ತುಗಳನ್ನು ವಿಧಿಸಿದೆ. ಅಂದರೆ ನಿಮಗೆ ಇಷ್ಟ ಬಂದಷ್ಟು ಬಾರಿ ಬದಲಾಯಿಸಲು ಸಾಧ್ಯವಿಲ್ಲ.
- ಹೆಸರು: ಕೇವಲ ಎರಡು ಬಾರಿ ಮಾತ್ರ ಬದಲಾಯಿಸಬಹುದು.
- ಹುಟ್ಟಿದ ದಿನಾಂಕ (DOB): ಜೀವನದಲ್ಲಿ ಕೇವಲ ಒಂದು ಬಾರಿ ಮಾತ್ರ ಅಪ್‌ಡೇಟ್ ಮಾಡಲು ಅವಕಾಶವಿದೆ.
ನಿಯಮಗಳು ಹೀಗಿವೆ:
- ಹೆಸರು: ಜೀವಿತಾವಧಿಯಲ್ಲಿ ಎರಡು ಬಾರಿ ಮಾತ್ರ ಬದಲಾಯಿಸಲು ಅವಕಾಶ.
- ಹುಟ್ಟಿದ ದಿನಾಂಕ: ಕೇವಲ ಒಂದು ಬಾರಿ ಮಾತ್ರ ಬದಲಾಯಿಸಲು ಸಾಧ್ಯ.
- ಲಿಂಗ (Gender): ಕೇವಲ ಒಂದು ಬಾರಿ ಮಾತ್ರ ಅಪ್‌ಡೇಟ್ ಮಾಡಬಹುದು.
- ವಿಳಾಸ (Address): ವಿಳಾಸ ಬದಲಾವಣೆಗೆ ಯಾವುದೇ ಮಿತಿ ಇಲ್ಲ, ಎಷ್ಟು ಬಾರಿಯಾದರೂ ಬದಲಾಯಿಸಬಹುದು.
ಮಿತಿ ಮೀರಿದ ನಂತರ ಏನು ಮಾಡಬೇಕು?
ಒಂದು ವೇಳೆ ನಿಗದಿತ ಮಿತಿ ಮೀರಿದ ನಂತರವೂ ಮಾಹಿತಿಯಲ್ಲಿ ತಪ್ಪುಗಳಿದ್ದು, ಅದನ್ನು ಬದಲಾಯಿಸಲೇಬೇಕಾದ ಪರಿಸ್ಥಿತಿ ಇದ್ದರೆ, ನೀವು ಆಧಾರ್ ಪ್ರಾದೇಶಿಕ ಕಚೇರಿಯನ್ನು (Aadhaar Regional Office) ಸಂಪರ್ಕಿಸಬೇಕು. ಅಲ್ಲಿನ ಅಧಿಕಾರಿಗಳಿಗೆ ಸೂಕ್ತ ಕಾರಣ ಮತ್ತು ವಿವರಣೆ ನೀಡಬೇಕಾಗುತ್ತದೆ. ಅಧಿಕಾರಿಗಳು ಪರಿಶೀಲಿಸಿದ ನಂತರವೇ ಅನುಮತಿ ನೀಡುತ್ತಾರೆ.
ಆಧಾರ್‌ನಲ್ಲಿ ಯಾವುದೇ ಬದಲಾವಣೆ ಮಾಡಲು ಅಗತ್ಯವಾದ ಪೂರಕ ದಾಖಲೆಗಳನ್ನು (Proof) ಸಲ್ಲಿಸುವುದು ಕಡ್ಡಾಯ. ಇಮೇಲ್ ಮೂಲಕವೂ ನೀವು UIDAI ಅಧಿಕಾರಿಗಳನ್ನು ಸಂಪರ್ಕಿಸಬಹುದು. ಆದ್ದರಿಂದ ಆಧಾರ್ ವಿವರಗಳನ್ನು ಬದಲಾಯಿಸುವ ಮೊದಲು ಒಂದಕ್ಕೆ ಎರಡು ಬಾರಿ ಸರಿಯಾಗಿದೆಯೇ ಎಂದು ಪರಿಶೀಲಿಸಿಕೊಳ್ಳುವುದು ಉತ್ತಮ.

