HomeLatest NewsSHOCKING : ಸಾಕು ನಾಯಿಯನ್ನ ನೆಲಕ್ಕೆ ಎತ್ತಿಬಡಿದು ಹಿಂಸಿಸಿದ ಮನೆಕೆಲಸದಾಕೆ : ಆಘಾತಕಾರಿ ವೀಡಿಯೋ ವೈರಲ್...

SHOCKING : ಸಾಕು ನಾಯಿಯನ್ನ ನೆಲಕ್ಕೆ ಎತ್ತಿಬಡಿದು ಹಿಂಸಿಸಿದ ಮನೆಕೆಲಸದಾಕೆ : ಆಘಾತಕಾರಿ ವೀಡಿಯೋ ವೈರಲ್ |WATCH VIDEO

ಮನೆಕೆಲಸದಾಕೆ ಸಾಕು ನಾಯಿಗೆ ಕ್ರೂರವಾಗಿ ಚಿತ್ರಹಿಂಸೆ ನೀಡಿದ ಆಘಾತಕಾರಿ ಘಟನೆ ಜೈಪುರದಲ್ಲಿ ನಡೆದಿದ್ದು, ವೀಡಿಯೋ ಪ್ರಾಣಿಪ್ರಿಯರ ಕೆಂಗಣ್ಣಿಗೆ ಗುರಿಯಾಗಿದೆ.

ಮಾಲೀಕರು ಕೆಲಸದಲ್ಲಿರುವಾಗ ತಮ್ಮ ಸಾಕುಪ್ರಾಣಿಗಳನ್ನು ಮನೆ ಸಹಾಯಕರ ಆರೈಕೆಯಲ್ಲಿ ಮನೆಯಲ್ಲಿಯೇ ಬಿಡುತ್ತಾರೆ. ಈ ಸಂದರ್ಭದಲ್ಲಿ, ಪ್ರಾಣಿಗಳ ಮೇಲಿನ ದೌರ್ಜನ್ಯದ ಆಘಾತಕಾರಿ ಪ್ರಕರಣ ಬೆಳಕಿಗೆ ಬಂದಿದೆ.
ಮನೆಯ ಸಹಾಯಕಿ ಮಾಲೀಕರು ಇಲ್ಲದೇ ಇದ್ದಾಗ ಸಾಕು ನಾಯಿಯ ಮೇಲೆ ಹಲ್ಲೆ ಮಾಡಿದ್ದಾಳೆ. ಮನೆಯ ಲಿವಿಂಗ್ ರೂಮಿನಲ್ಲಿ ಅಳವಡಿಸಲಾದ ಸಿಸಿಟಿವಿ ಕ್ಯಾಮೆರಾದಲ್ಲಿ ಈ ಕ್ರೂರ ಕೃತ್ಯ ಸೆರೆಯಾಗಿದೆ. ವಿಡಿಯೋದಲ್ಲಿ ಮಹಿಳೆ ಸಾಕು ನಾಯಿಯನ್ನು ಎತ್ತಿಹಾಕಿ ಕ್ರೂರವಾಗಿ ಥಳಿಸುತ್ತಿರುವುದನ್ನು ತೋರಿಸುತ್ತದೆ.

ದೃಶ್ಯಾವಳಿಯಲ್ಲಿ ಮಹಿಳೆ ನಾಯಿಯನ್ನು ಎತ್ತಿ ನೆಲಕ್ಕೆ ಬಡಿಯುವುದನ್ನು ಕಾಣಬಹುದು.. ಡಾ. ಸಂಗೀತಾ ಎಂಬುವವರ ಮನೆಯಲ್ಲಿ ಈ ಘಟನೆ ನಡೆದಿದೆ. ಮನೆ ಮಾಲೀಕರು ಇಲ್ಲದ ಸಂದರ್ಭದಲ್ಲಿ ಮನೆ ಕೆಲಸದಾಕೆ ರಾಕ್ಷಸಿ ರೀತಿಯಲ್ಲಿ ವರ್ತಿಸಿದ್ದಾಳೆ. ಮಹಿಳೆ ವಿರುದ್ಧ ಕಠಿಣ ಕ್ರಮಕ್ಕೆ ನೆಟ್ಟಿಗರು ಆಗ್ರಹಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular