ಮನೆಕೆಲಸದಾಕೆ ಸಾಕು ನಾಯಿಗೆ ಕ್ರೂರವಾಗಿ ಚಿತ್ರಹಿಂಸೆ ನೀಡಿದ ಆಘಾತಕಾರಿ ಘಟನೆ ಜೈಪುರದಲ್ಲಿ ನಡೆದಿದ್ದು, ವೀಡಿಯೋ ಪ್ರಾಣಿಪ್ರಿಯರ ಕೆಂಗಣ್ಣಿಗೆ ಗುರಿಯಾಗಿದೆ.
ಮಾಲೀಕರು ಕೆಲಸದಲ್ಲಿರುವಾಗ ತಮ್ಮ ಸಾಕುಪ್ರಾಣಿಗಳನ್ನು ಮನೆ ಸಹಾಯಕರ ಆರೈಕೆಯಲ್ಲಿ ಮನೆಯಲ್ಲಿಯೇ ಬಿಡುತ್ತಾರೆ. ಈ ಸಂದರ್ಭದಲ್ಲಿ, ಪ್ರಾಣಿಗಳ ಮೇಲಿನ ದೌರ್ಜನ್ಯದ ಆಘಾತಕಾರಿ ಪ್ರಕರಣ ಬೆಳಕಿಗೆ ಬಂದಿದೆ.
ಮನೆಯ ಸಹಾಯಕಿ ಮಾಲೀಕರು ಇಲ್ಲದೇ ಇದ್ದಾಗ ಸಾಕು ನಾಯಿಯ ಮೇಲೆ ಹಲ್ಲೆ ಮಾಡಿದ್ದಾಳೆ. ಮನೆಯ ಲಿವಿಂಗ್ ರೂಮಿನಲ್ಲಿ ಅಳವಡಿಸಲಾದ ಸಿಸಿಟಿವಿ ಕ್ಯಾಮೆರಾದಲ್ಲಿ ಈ ಕ್ರೂರ ಕೃತ್ಯ ಸೆರೆಯಾಗಿದೆ. ವಿಡಿಯೋದಲ್ಲಿ ಮಹಿಳೆ ಸಾಕು ನಾಯಿಯನ್ನು ಎತ್ತಿಹಾಕಿ ಕ್ರೂರವಾಗಿ ಥಳಿಸುತ್ತಿರುವುದನ್ನು ತೋರಿಸುತ್ತದೆ.
ದೃಶ್ಯಾವಳಿಯಲ್ಲಿ ಮಹಿಳೆ ನಾಯಿಯನ್ನು ಎತ್ತಿ ನೆಲಕ್ಕೆ ಬಡಿಯುವುದನ್ನು ಕಾಣಬಹುದು.. ಡಾ. ಸಂಗೀತಾ ಎಂಬುವವರ ಮನೆಯಲ್ಲಿ ಈ ಘಟನೆ ನಡೆದಿದೆ. ಮನೆ ಮಾಲೀಕರು ಇಲ್ಲದ ಸಂದರ್ಭದಲ್ಲಿ ಮನೆ ಕೆಲಸದಾಕೆ ರಾಕ್ಷಸಿ ರೀತಿಯಲ್ಲಿ ವರ್ತಿಸಿದ್ದಾಳೆ. ಮಹಿಳೆ ವಿರುದ್ಧ ಕಠಿಣ ಕ್ರಮಕ್ಕೆ ನೆಟ್ಟಿಗರು ಆಗ್ರಹಿಸಿದ್ದಾರೆ.
Shocking cruelty in #Jaipur — A domestic worker was caught on CCTV mercilessly beating an innocent pet dog, 'Sophie'. An FIR has been filed after the footage surfaced.
— Vidit Sharma 🇮🇳 (@TheViditsharma) July 12, 2025
Why are people becoming so insensitive and cruel? Animals deserve love, not violence. 💔 #AnimalAbuse… pic.twitter.com/qAFLsC8eCm