ಬೆಂಗಳೂರು: ಬೆಂಗಳೂರಿನಲ್ಲಿ 17 ಮನೆಗಳ್ಳತನ ಮಾಡಿದ್ದ ಖತರ್ನಾಕ್ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರಿನ ಕೆ.ಆರ್.ಪುರಂ.ಠಾಣೆ ಪೊಲೀಸರು ಖತರ್ನಾಕ್ ಕಳ್ಳನನ್ನು ಬಂಧ್೮ಸಿದ್ದು, ಬಂಧಿತನಿಂದ 70 ಲಕ್ಷ ನಗದು, 500 ಗ್ರಾಂ ಚಿನ್ನಾಭರಣ, 1.5 ಕೆಜಿ ಬೆಳ್ಳಿ ವಶಪಡಿಸಿಕೊಳ್ಳಲಾಗಿದೆ ಒಟ್ಟು 17 ಮನೆಗಳನ್ನು ದೋಚಿದ್ದ ಆರೋಪಿ ಮೊಹಮ್ಮದ್ ಇಸ್ರಾರ್ ನನ್ನು ಬಂಧಿಸಲಾಗಿದೆ.
ಕಳ್ಳತನಕ್ಕೂ ಮುನ್ನ ಹಾಗೂ ಕಳ್ಳತನದ ಬಳಿಕ ಬಟ್ಟೆ ಬದಲಿಸಿಕೊಂಡು ತೆರಳುತ್ತಿದ್ದ. ಅಲ್ಲದೇ ತನ್ನ ಬೈಕ್ ನಂಬರ್ ಪ್ಲೇಟ್ ಗಳನ್ನು ಬದಲಿಸುತ್ತಿದ್ದ. ಕಳೆದ ಮೂರು ವರ್ಷಗಳಿಂದ ಈತ ಪೊಲೀಸರಿಗೆ ಕಣ್ತಪ್ಪಿಸಿ ಓಡಾಡುತ್ತಿದ್ದ. ಇದೀಗ ಕೆ.ಆರ್.ಪುರಂ ಪ್ಪೊಲೀಸರು ಈಗ ಈತನನ್ನು ಬಂಧಿಸಿದ್ದಾರೆ.
