ಜೈಪುರ: ಹಾಸ್ಟೆಲ್ ನಲ್ಲಿ ವಿದ್ಯಾರ್ಥಿಗಳು ಹಾಸಿಗೆಯಲ್ಲಿ ಮೂತ್ರ ವಿಸರ್ಜನೆ ಮಾಡಿದರು ಎಂಬ ಕಾರಣಕ್ಕೆ ಶಿಕ್ಷಕರು ಕಾದ ಕಬ್ಬಿಣದ ಸರಳಿನಿಂದ ಬರೆ ಹಾಕಿರುವ ಘಟನೆ ರಾಜಸ್ಥಾನದ ಬರ್ಮರ್ ನಲ್ಲಿ ನಡೆದಿದೆ.
ಬರ್ಮರ್ ಜಿಲ್ಲೆಯ ದೇವಾಲಯ ಸಂಕಿರ್ಣದೊಳಗಿನ ಹಾಸ್ಟೆಲ್ ನಲ್ಲಿ ಕೆಲ ವಿದ್ಯಾರ್ಥಿಗಳು ಹಾಸಿಗೆಯಲ್ಲಿ ಮೂತ್ರ ಮಾಡಿಕೊಂಡಿದ್ದಾರೆ. ಇದನ್ನು ಕಂಡು ಸಿಟ್ಟಿಗೆದ್ದ ಶಿಕ್ಷಕರೊಬ್ಬರು ಮಕ್ಕಳಿಗೆ ಕಾದ ಕಬ್ಬಿಣದ ಸರಳಿನಿಂದ ಬರೆ ಕೊಟ್ಟಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿಯೂ ವಿಡಿಯ್ ವರಲ್ ಆಗಿದೆ. ಈ ಬಗ್ಗೆ ಮಾನವ ಹಕ್ಕುಗಳ ಆಯೋಗ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದೆ.
ಅಲ್ಲದೇ ಪ್ರಕರಣ ಸಂಅಬ್ಂಧ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (NHRC) ಜಿಲ್ಲಾಡಳಿತ ಹಾಗೂ ಬಾರ್ಮರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ನೋಟಿಸ್ ಜಾರಿ ಮಾಡಿದೆ. ಸಂತ್ರಸ್ತ ವಿದ್ಯಾರ್ಥಿಗಳ ಆರೋಗ್ಯ ಸ್ಥಿತಿ ಸೇರಿದಂತೆ ಎರಡು ವಾರಗಳಲ್ಲಿ ವರದಿ ನೀಡುವಂತೆ ಸೂಚಿಸಿದೆ.