HomeKarnatakaಬುದ್ಧಿಮಾಂದ್ಯನಂತೆ ನಾಟಕ....ಬಸ್ ಸ್ಟ್ಯಾಂಡ್ ನಲ್ಲಿ ಓಡಾಟ..... ಪರ್ಸ್, ಮೊಬೈಲ್ ಕದ್ದು ಎಸ್ಕೇಪ್; ಖತರ್ನಾಕ್ ಕಳ್ಳ ಅರೆಸ್ಟ್

ಬುದ್ಧಿಮಾಂದ್ಯನಂತೆ ನಾಟಕ….ಬಸ್ ಸ್ಟ್ಯಾಂಡ್ ನಲ್ಲಿ ಓಡಾಟ….. ಪರ್ಸ್, ಮೊಬೈಲ್ ಕದ್ದು ಎಸ್ಕೇಪ್; ಖತರ್ನಾಕ್ ಕಳ್ಳ ಅರೆಸ್ಟ್

ಬೆಂಗಳೂರು: ಕಳ್ಳತನ ಮಾಡಲು ಕಳ್ಳರು ಏನೇನಲ್ಲ ನಾಟಕವಾಡುತ್ತಾರೆ ನೋಡಿ…ಇಲ್ಲೋರ್ವ ವ್ಯಕ್ತಿ ತಾನು ಬುದ್ಧಿಮಾಂದ್ಯ ಎಂಬಂತೆ ನಟಿಸಿ ಬಸ್ ನಿಲ್ದಾಣಗಳಲ್ಲಿ ಓಡಾಡಿ ಪ್ರಯಾಣಿಕರ ಪರ್ಸ್, ಮೊಬೈಲ್ ಎಗರಿಸಿ ಪರಾರಿಯಾಗುತ್ತಿದ್ದ. ಹೀಗೆ ಕಳ್ಳತನ ಮಾಡುತ್ತಿದ್ದ ಖತರ್ನಾಕ್ ವ್ಯಕ್ತಿ ಈಗ ಪೊಲೀಸರ ಅತಿಥಿಯಾಗಿದ್ದಾನೆ.

ಬುದ್ದಿಮಾಂದ್ಯನಂತೆ ನಟಿಸುತ್ತಾ ಬಸ್ ಬಳಿ ಓಡಾಡುತ್ತಿದ್ದ ವ್ಯಕ್ತಿ ಬಸ್ ಹತ್ತುತ್ತಿದ್ದ ಪ್ರಯಾಣಿಕರ ಪರ್ಸ್, ಮೊಬೈಲ್, ಹಣ ಕದ್ದು ಪರಾರಿಯಾಗುತ್ತಿದ್ದ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ವಿನಯ್ ಬಂಧಿತ ಆರೋಪಿ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬಂಧಿತನಿಂದ 50 ಲಕ್ಷ ಮೌಲ್ಯದ ವಿವಿಧ ಬ್ರ್ಯಾಂಡ್ ನ 150ಕ್ಕೂ ಹೆಚ್ಚು ಮೊಬೈಲ್, ಹಣ ವಶಕ್ಕೆ ಪಡೆಯಲಾಗಿದೆ.

For Latest News Updates, Join Our Whatsapp Community🚩
RELATED ARTICLES

Most Popular