HomeKarnatakaBREAKING : ರಾಯಚೂರಿನಲ್ಲಿ ಘೋರ ಘಟನೆ ; ಕೊಂಡ ಹಾಯುವಾಗ ಆಯತಪ್ಪಿ ಬಿದ್ದು ವ್ಯಕ್ತಿ...

BREAKING : ರಾಯಚೂರಿನಲ್ಲಿ ಘೋರ ಘಟನೆ ; ಕೊಂಡ ಹಾಯುವಾಗ ಆಯತಪ್ಪಿ ಬಿದ್ದು ವ್ಯಕ್ತಿ ಸುಟ್ಟು ಭಸ್ಮ..!

ರಾಯಚೂರು : ರಾಯಚೂರಿನಲ್ಲಿ ಘೋರ ಘಟನೆ ಸಂಭವಿಸಿದ್ದು, ಕೊಂಡ ಹಾಯುವಾಗ ಆಯತಪ್ಪಿ ಬಿದ್ದು ವ್ಯಕ್ತಿ ಸುಟ್ಟು ಭಸ್ಮವಾದ ಘಟನೆ ನಡೆದಿದೆ.

ರಾಯಚೂರಿನ ಮಸ್ಕಿ ತಾಲೂಕಿನ ಬೊಮ್ಮನಾಳ ಗ್ರಾಮದಲ್ಲಿ ತಡರಾತ್ರಿ ಈ ಘಟನೆ ನಡೆದಿದೆ. ಯಮನಪ್ಪ ನಾಯಕ್ (45) ಎಂಬ ವ್ಯಕ್ತಿ ಮೃತಪಟ್ಟಿದ್ದಾರೆ.

ಮೊಹರಂ ಹಬ್ಬದ ಆಚರಣೆ ವೇಳೆ ಕೊಂಡ ಹಾಯುವ ಪದ್ದತಿ ಉತ್ತರ ಕರ್ನಾಟಕ ಭಾಗದಲ್ಲಿ ಚಾಲ್ತಿಯಲ್ಲಿದೆ. ಅಂತೆಯೇ ಬೆಂಕಿ ಹಾಯಲು ಯಮನಪ್ಪ ಮುಂದಾಗಿದ್ದರು. ಈ ವೇಳೆ ಬೆಂಕಿಗೆ ಬಿದ್ದು ಅವರು ಸುಟ್ಟು ಕರಕಲಾಗಿದ್ದಾರೆ.ಸ್ಥಳೀಯರು ನೀರು ಹಾಯಿಸಿ ರಕ್ಷಣೆಗೆ ಮುಂದಾದರೂ ಕೂಡ ಬೆಂಕಿ ಆವರಿಸಿ ಮೈ ಸುಟ್ಟು ಕರಕಲಾಗಿದೆ. ಈ ಸಂಬಂಧ ತುರುವಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular