HomeUncategorizedಹೋಂವರ್ಕ್ ಮಾಡಿಲ್ಲವೆಂದು ಕೆನ್ನೆಗೆ ಬಾರಿಸಿದ ಶಿಕ್ಷಕಿ; 6 ವರ್ಷದ ಬಾಲಕ ದುರಂತ ಸಾವು!

ಹೋಂವರ್ಕ್ ಮಾಡಿಲ್ಲವೆಂದು ಕೆನ್ನೆಗೆ ಬಾರಿಸಿದ ಶಿಕ್ಷಕಿ; 6 ವರ್ಷದ ಬಾಲಕ ದುರಂತ ಸಾವು!

ವಿಶಾಖಪಟ್ಟಣ: ಮನೆಕೆಲಸ (ಹೋಮ್‌ವರ್ಕ್) ಪೂರ್ಣಗೊಳಿಸಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಶಿಕ್ಷಕಿಯೊಬ್ಬರು ಗದರಿ ಕಪಾಳಮೋಕ್ಷ ಮಾಡಿದ ಪರಿಣಾಮ, 6 ವರ್ಷದ ಎಲ್‌ಕೆಜಿ ಬಾಲಕನೊಬ್ಬ ಶಾಲೆಯಲ್ಲೇ ಕುಸಿದುಬಿದ್ದು ಮೃತಪಟ್ಟ ಘಟನೆ ವಿಶಾಖಪಟ್ಟಣಂನಲ್ಲಿ ನಡೆದಿದೆ.

ಇಲ್ಲಿನ ಒನ್ ಟೌನ್ ಪ್ರದೇಶದ ಲಿಟಲ್ ಗಾರ್ಡನ್ ಶಾಲೆಯಲ್ಲಿ ಈ ದುರಂತ ಸಂಭವಿಸಿದ್ದು, ಮೃತ ಬಾಲಕನನ್ನು ಪ್ರಣಯ್ ತೇಜ್ (6) ಎಂದು ಗುರುತಿಸಲಾಗಿದೆ. ಶಿಕ್ಷಕಿ ಕೋಲು ಹಿಡಿದು ಗದರಿಸಿ ನಡೆಸಿದ ಹಲ್ಲೆಯಿಂದಲೇ ಮಗು ತೀವ್ರ ಭೀತಿಗೊಳಗಾಗಿ ಮೃತಪಟ್ಟಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.ಘಟನೆಗೆ ಸಂಬಂಧಿಸಿದಂತೆ ಶಾಲೆಯ ತರಗತಿಯಲ್ಲಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಈ ವಿಡಿಯೋ ಈಗ ಸಾರ್ವಜನಿಕರಲ್ಲಿ ಭಾರಿ ಆಕ್ರೋಶ ಮೂಡಿಸಿದೆ.

ಸಿಸಿಟಿವಿಯಲ್ಲೇನಿದೆ?:

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ವಿಡಿಯೋದಲ್ಲಿ ಬಾಲಕ ಪ್ರಣಯ್ ತೇಜ್ ಅಳುತ್ತಾ, ಶಿಕ್ಷಕಿಯ ಬಳಿ ಕೈಜೋಡಿಸಿ ಬೇಡಿಕೊಳ್ಳುವುದು ಕಾಣಿಸುತ್ತದೆ. ಬಾಲಕ ಭಯದಿಂದ ಕೆಮ್ಮಲು ಪ್ರಾರಂಭಿಸಿದರೂ ಲೆಕ್ಕಿಸದ ಶಿಕ್ಷಕಿ, ಆತನ ಶರ್ಟ್, ಟೈ ಹಾಗೂ ಪ್ಯಾಂಟ್ ಹಿಡಿದು ಎಳೆದಾಡಿ ಕಪಾಳಕ್ಕೆ ಬಾರಿಸಿದ್ದಾಳೆ.

https://x.com/bigtvtelugu/status/2090383868704727498

ತಕ್ಷಣವೇ ಕುಸಿದುಬಿದ್ದ ಮಗು: ಹೊಡೆತ ತಿಂದ ಕೆಲವೇ ಸೆಕೆಂಡುಗಳಲ್ಲಿ ಬಾಲಕ ತೀವ್ರ ಆಘಾತದಿಂದ ಶಿಕ್ಷಕಿಯ ಮೇಲೆಯೇ ಕುಸಿದುಬಿದ್ದಿದ್ದಾನೆ. ಶಿಕ್ಷಕಿ ಕುಳಿತಲ್ಲಿಂದಲೇ ಮಗುವನ್ನು ಎತ್ತಲು ಯತ್ನಿಸಿದರೂ ಬಾಲಕನಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಬಾಲಕ ತೀವ್ರ ಭಯದಿಂದ ಹೃದಯಾಘಾತಕ್ಕೆ ಒಳಗಾಗಿರಬಹುದು ಎಂದು ಶಂಕಿಸಲಾಗಿದೆ.

ಆಸ್ಪತ್ರೆಗೆ ತಲುಪುವಷ್ಟರಲ್ಲೇ ಕೊನೆಯುಸಿರು

ಮಗು ಪ್ರಜ್ಞೆ ತಪ್ಪಿ ಬೀಳುತ್ತಿದ್ದಂತೆ ಶಾಲಾ ಸಿಬ್ಬಂದಿ ತಕ್ಷಣವೇ ಆತನನ್ನು ವಿಶಾಖಪಟ್ಟಣಂನ ಕಿಂಗ್ ಜಾರ್ಜ್ ಆಸ್ಪತ್ರೆಗೆ (KGH) ಕರೆದೊಯ್ದಿದ್ದಾರೆ. ಆದರೆ, ಪರೀಕ್ಷಿಸಿದ ವೈದ್ಯರು ಮಗು ಆಸ್ಪತ್ರೆಗೆ ತರುವಷ್ಟರಲ್ಲೇ ಮೃತಪಟ್ಟಿರುವುದಾಗಿ ಸ್ಪಷ್ಟಪಡಿಸಿದ್ದಾರೆ.

ಶಾಲೆ ಮುಂದೆ ಪೋಷಕರ ಆಕ್ರೋಶ – ಪೊಲೀಸ್ ತನಿಖೆ ಚುರುಕು

ಸಿಸಿಟಿವಿ ದೃಶ್ಯಾವಳಿಗಳನ್ನು ವೀಕ್ಷಿಸಿದ ಮಗುವಿನ ಪೋಷಕರು ಹಾಗೂ ಸಂಬಂಧಿಕರು ಆಕ್ರೋಶಗೊಂಡು ಶಾಲೆ ಮತ್ತು ಕೆಜಿಎಚ್ ಆಸ್ಪತ್ರೆಯ ಮುಂದೆ ಭಾರಿ ಪ್ರತಿಭಟನೆ ನಡೆಸಿದರು. ಮಗುವಿನ ಸಾವಿಗೆ ಕಾರಣರಾದ ಶಿಕ್ಷಕಿ ಮತ್ತು ಶಾಲಾ ಆಡಳಿತ ಮಂಡಳಿ ವಿರುದ್ಧ ತಕ್ಷಣವೇ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪೋಷಕರ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಶಾಲೆಯ ಸಿಬ್ಬಂದಿಯನ್ನು ವಿಚಾರಣೆಗೆ ಒಳಪಡಿಸಲಾಗಿದ್ದು, ಮಗುವಿನ ಸಾವಿಗೆ ದೈಹಿಕ ದೌರ್ಜನ್ಯವೇ ಕಾರಣವೇ ಅಥವಾ ಬೇರೇನಾದರೂ ಆರೋಗ್ಯ ಸಮಸ್ಯೆ ಇತ್ತೇ ಎಂಬುದನ್ನು ತಿಳಿಯಲು ಮರಣೋತ್ತರ ಪರೀಕ್ಷೆಯ ವರದಿಗೆ ಕಾಯಲಾಗುತ್ತಿದೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

LEAVE A REPLY

Please enter your comment!
Please enter your name here

Most Popular