ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಮ್ದಾದ ಗೃಹಲಕ್ಷ್ಮೀ ಯೋಜನೆಯ ಅರ್ಜಿ ನಿಯಮದಲ್ಲಿ ಮಹತ್ವದ ಬದಲಾವಣೆಗಾಳಗಿದ್ದು, ಇನ್ಮುಂದೆ ಮನೆ ಯಜಮಾನಿಯರು 2000 ರೂಪಾಯಿ ಮಾಸಿಕ ಸಹಾಯ ಧನ ಪಡೆಯಲು ಕೆಲ ದಾಖಲೆಗಳನ್ನು ಸಲ್ಲಿಸುವುದು ಕಡ್ಡಾಯವಾಗಿದೆ.
ರಾಜ್ಯ ಸರ್ಕಾರ ಗ್ಯಾಅರಂಟಿ ಯೋಜನೆಗಳ ಮರುಪರಿಷ್ಕರಣೆಗೆ ಮುಂದಾಗಿರುವುದರಿಂದ ಶೀಘ್ರದಲ್ಲಿಯೇ ಗೃಹಲಕ್ಷ್ಮೀ ಯೋಜನೆಯ ಅರ್ಜಿ ಸರ್ವೆ ಕಾರ್ಯ ಕೂಡ ಆರಂಭವಾಗಲಿದೆ. ಈಗಾಗಲೇ ಫಲಾನುಭವಿಗಳ ಅರ್ಜಿ ಸಲ್ಲಿಕೆ ಫಾರ್ಮ್ ಅಂತಿಮಗೊಳಿಸಿದೆ. ಚುನಾವಣೆ ಮಾದರಿ ನೀತಿ ಸಂಹಿತೆ ಮುಗಿದ ಬಳಿಕ ಸರ್ವೆ ಆರಂಭ ಆಗುವ ಸಾಧ್ಯತೆ ಇದೆ.
ಗೃಹಲಕ್ಷ್ಮಿ ಯೋಜನೆಯ ಮರುಪರಿಶೀಲನಾ ಅರ್ಜಿಯಲ್ಲಿ ಹಲವು ಹೊಸ ಪ್ರಶ್ನೆಗಳ ಸೇರ್ಪಡೆ ಮಾಡಲಾಗಿದೆ. ಎಸ್ಐಆರ್ ಮಾದರಿಯಲ್ಲೇ ಗೃಹಲಕ್ಷ್ಮೀ ಮರುಪರಿಶೀಲನಾ ಅರ್ಜಿ ಇದ್ದು, ಆ್ಯಪ್‌ನಲ್ಲಿ ಸರ್ವೆ ಆದರೂ ಕೂಡ ಆಫ್‌ಲೈನ್ ಮರುಪರಿಶೀಲನಾ ಅರ್ಜಿ ಭರ್ತಿ ಮಾಡಲೇಬೇಕು. ಬ್ಯಾಂಕ್ ಖಾತೆ, ಆಧಾರ್ ಜೋಡಣೆ , ಪಡಿತರ ಚೀಟಿ ಸಂಖ್ಯೆ ಸಂಬಂಧ ಹಲವು ಪ್ರಶ್ನೆ ಸೇರ್ಪಡೆ ಮಾಡಲಾಗಿದೆ.
ಈ ಹಿಂದೆ ಆಗಿದ್ದ ಲೋಪಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಸರ್ಕಾರ ಗಮನಹರಿಸಿದೆ. ಹೀಗಾಗಿ ಅನ್ಯ ರಾಜ್ಯದ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾವಣೆ ಆಗದಂತೆ ಕ್ರಮ ಕೈಗೊಳ್ಳಲು ಅರ್ಜಿಯಲ್ಲಿ ಹಲವು ಹೊಸ ಪ್ರಶ್ನಾವಳಿಗಳನ್ನು ಕೇಳಲಾಗಿದೆ.
ಈ ಹೊಸ ಅರ್ಜಿಯೊಂದಿಗೆ ಗಣತಿದಾರರು ಮನೆ ಮನೆಗೆ ಭೇಟಿ ನೀಡಿ ಸರ್ವೇ ಮಾಡಲಿದ್ದು, ಮರುಪರಿಶೀಲನಾ ಕಾರ್ಯದ ಮೇಲೆ ನಿಗಾ ವಹಿಸಲು ಜಿಲ್ಲಾ, ತಾಲೂಕು, ಜಿಬಿಎ ಮಟ್ಟದ ಸಮಿತಿ ರಚನೆ ಮಾಡಲಾಗಿದೆ. ಇನ್ನು ಆ್ಯಪ್ ನಲ್ಲಿ ಸರ್ವೆ ಆದರೂ ಕೂಡ ಆಫ್ ಲೈನ್ ಮರುಪರಿಶೀಲನಾ ಅರ್ಜಿ ಭರ್ತಿ ಕಡ್ಡಾಯಗೊಳಿಸಲಾಗಿದೆ. ಬ್ಯಾಂಕ್ ಖಾತೆ, ಆಧಾರ್ ಜೋಡಣೆ , ಪಡಿತರ ಚೀಟಿ ಸಂಖ್ಯೆ ಸಂಬಂಧ ಹಲವು ಪ್ರಶ್ನೆಗಳನ್ನು ಮರುಪರೀಲನಾ ಅರ್ಜಿಯಲ್ಲಿ ಸೇರ್ಪಡೆ ಮಾಡಲಾಗಿದೆ.
ಗೃಹಜ್ಯೋತಿ ಯೋಜನೆಯಲ್ಲಿ ನಡೆದ ಪರಿಶೀಲನೆಯ ಮಾದರಿಯಲ್ಲೇ ಈ ಕಾರ್ಯಾಚರಣೆ ನಡೆಯಲಿದ್ದು, ಪ್ರಸ್ತುತ ನಡೆಯುತ್ತಿರುವ ಎಸ್ಐಆರ್ ಪೂರ್ಣಗೊಂಡ ಬಳಿಕ ಪ್ರಕ್ರಿಯೆ ಆರಂಭಿಸುವ ಸಾಧ್ಯತೆ ಇದೆ. ಮರುಪರಿಶೀಲನೆಯ ಸಂದರ್ಭದಲ್ಲಿ ನಿಯೋಜಿತ ಸಿಬ್ಬಂದಿ ಹಾಗೂ ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರು ಮನೆ-ಮನೆಗೆ ತೆರಳಿ ಫಲಾನುಭವಿಗಳ ವಿವರಗಳನ್ನು ಸಂಗ್ರಹಿಸಲಿದ್ದಾರೆ. ಮಾಹಿತಿಯನ್ನು ಭೌತಿಕ ದಾಖಲೆಗಳ ಜೊತೆಗೆ ಡಿಜಿಟಲ್ ರೂಪದಲ್ಲೂ ದಾಖಲಿಸಲಾಗುತ್ತದೆ. ಫಲಾನುಭವಿಗಳು ನಿಗದಿತ ಸೇವಾ ಕೇಂದ್ರಗಳಿಗೆ ತೆರಳಿ ಕೂಡ ಪರಿಶೀಲನೆ ಪೂರ್ಣಗೊಳಿಸಲು ಅವಕಾಶ ಇರಲಿದೆ.
ಈ ದಾಖಲೆಗಳು ಕಡ್ಡಾಯ:
ದೇಶದ ಯಾವುದೇ ಬ್ಯಾಂಕ್ ಖಾತೆಯಾಗಲಿ ಆದರೆ ಕರ್ನಾಟಕದಲ್ಲಿ ಬ್ಯಾಂಕ್ ಖಾತೆ ಇರಬೇಕು.
ಬ್ಯಾಂಕ್ ನಲ್ಲಿ ಸಾಲ ಪಡೆಯದ ಖಾತೆಯ ಅಕೌಂಟ್ ನಂಬರ್ ಗೃಹಲಕ್ಷ್ಮೀ ಯೋಜನೆಗೆ ಕೊಡಬೇಕು
ಜಂಟಿ ಖಾತೆ ಕೊಡಬಾರದು, ವೈಯಕ್ತಿಕ ಖಾತೆ ಇರಬೇಕು.
ಪಡಿತರ ಚೀಟಿ ಸಂಖ್ಯೆ ಕಡ್ಡಾಯ
ಮೊಬೈಲ್ ಗೆ ಆಧಾರ್ ಸಂಖ್ಯೆ ಆಗದವರು. ಮೊಬೈಲ್ ಗೆ ಆಧಾರ್ ಜೋಡಣೆ ಮಾಡಿಸುವುದು ಕಡ್ಡಾಯ
ನಿವೃತ್ತಿ ಪಿಂಚಣಿ ಪಡೆಯುತ್ತಿದ್ದರೆ, ಮಾಹಿತಿ ನೀಡುವುದು.

