ನವದೆಹಲಿ: ಸಾರ್ವಜನಿಕ ವಲಯದ ಬ್ಯಾಂಕ್ ಆಗಿರುವ ಬ್ಯಾಂಕ್ ಆಫ್ ಮಹಾರಾಷ್ಟ್ರ ಗೃಹ ಸಾಲದ ಬಡ್ಡಿ ದರವನ್ನು ಇಳಿಕೆ ಮಾಡಿದೆ. ಮಾನ್ಸೂನ್ ಧಮಾಕ ವಿಶೇಷ ಕೊಡುಗೆಯಡಿ ಗೃಹ ಸಾಲದ ಬಡ್ಡಿ ದರ ಇಳಿಕೆ ಮಾಡಿದ್ದು, ಸಂಸ್ಕರಣಾ ಶುಲ್ಕ ಮತ್ತು ದಾಖಲೆ ಶುಲ್ಕವನ್ನು ಸಂಪೂರ್ಣ ಮನ್ನಾ ಮಾಡಲಾಗಿದೆ.
ಬ್ಯಾಂಕ್ ಆಫ್ ಮಹಾರಾಷ್ಟ್ರ ಗೃಹ ಸಾಲದ ಬಡ್ಡಿ ದರವನ್ನು ಇಳಿಕೆ ಮಾಡಿದೆ. ಸೀಮಿತ ಅವಧಿಯ ಮಾನ್ಸೂನ್ ಧಮಾಕ ವಿಶೇಷ ಕೊಡುಗೆಯಡಿ ಈ ಸೌಲಭ್ಯ ನೀಡಲಾಗುತ್ತಿದ್ದು, ಇದರೊಂದಿಗೆ ದಾಖಲೆ ಶುಲ್ಕ ಮತ್ತು ಸಂಸ್ಕರಣಾ ಶುಲ್ಕವನ್ನು ಸಂಪೂರ್ಣ ಮನ್ನ ಮಾಡಲಾಗಿದೆ ಎಂದು ತಿಳಿಸಿದೆ.
ವಾಹನ ಸಾಲದ ಬಡ್ಡಿ ದರವನ್ನು ಶೇಕಡ 7.45 ರಿಂದ ಆರಂಭವಾಗುವಂತೆ ನಿಗದಿಪಡಿಸಲಾಗಿದೆ. ಕಡಿಮೆ ಬಡ್ಡಿ ಮತ್ತು ಶೂನ್ಯ ಸಂಸ್ಕರಣಾ ಶುಲ್ಕದಿಂದ ಮಾಸಿಕ ಸಾಲ ಕಂತಿನ ಹೊರೆ ಕಡಿಮೆಯಾಗಲಿದೆ ಎಂದು ಬ್ಯಾಂಕ್ ಆಫ್ ಮಹಾರಾಷ್ಟ್ರ ತಿಳಿಸಿದೆ.

