ನವದೆಹಲಿ: ಸಮಾಜವಾದಿ ಪಕ್ಷದ ಮುಖಂಡ ಸ್ವಾಮಿ ಪ್ರಸಾದ್ ಮೌರ್ಯ ಮತ್ತೊಮ್ಮೆ ವಿವಾದಕ್ಕೆ ಸಿಲುಕಿದ್ದಾರೆ ಮತ್ತು ಈ ಬಾರಿ ಅವರು “ಹಿಂದೂ ಧರ್ಮವು ಒಂದು ಧರ್ಮವಲ್ಲ, ಅದು ಕೇವಲ ಮೋಸ” ಎಂದು ಹೇಳಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಆರ್ ಎಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಹಿಂದಿನ ಹೇಳಿಕೆಗಳನ್ನು ಉಲ್ಲೇಖಿಸಿ, ಹಿಂದೂ ಧರ್ಮ ಎಂದು ಯಾವುದೇ ಧರ್ಮವಿಲ್ಲ, ಬದಲಿಗೆ ಅದು ಜೀವನ ವಿಧಾನವಾಗಿದೆ ಎಂದು ಹೇಳಿದರು.
https://twitter.com/i/status/1739470511049146678
“ಹಿಂದೂ ಬಸ್ ಏಕ್ ಧೋಖಾ ಹೈ… ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಹಿಂದೂ ಎಂದು ಕರೆಯಲ್ಪಡುವ ಯಾವುದೇ ಧರ್ಮವಿಲ್ಲ, ಬದಲಿಗೆ ಅದು ಜೀವನ ವಿಧಾನ ಎಂದು ಎರಡು ಬಾರಿ ಹೇಳಿದ್ದಾರೆ. ಹಿಂದೂ ಧರ್ಮ ಎಂಬುದೇ ಇಲ್ಲ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಈ ಜನರು ಇಂತಹ ಹೇಳಿಕೆಗಳನ್ನು ನೀಡಿದಾಗ ಭಾವನೆಗಳಿಗೆ ಧಕ್ಕೆಯಾಗುವುದಿಲ್ಲ ಆದರೆ ಸ್ವಾಮಿ ಪ್ರಸಾದ್ ಮೌರ್ಯ ಅದೇ ರೀತಿ ಹೇಳಿದರೆ ಅದು ಅಶಾಂತಿಯನ್ನು ಉಂಟುಮಾಡುತ್ತದೆ” ಎಂದು ಅವರು ಹೇಳಿದರು.