INDIA vs NDA: ವಿಪಕ್ಷ ಮೈತ್ರಿಕೂಟಕ್ಕೆ INDIA ಹೆಸರಿಟ್ಟ ಬೆನ್ನಲ್ಲೇ ಟ್ವಿಟರ್ ಬಯೋದಲ್ಲಿ ‘ಇಂಡಿಯಾ’ ತೆಗೆದು ‘ಭಾರತ’ ಸೇರಿಸಿದ ಹಿಮಂತ್ ಬಿಸ್ವಾ ಶರ್ಮಾ

ಮಂಗಳವಾರ ಬೆಂಗಳೂರಿನಲ್ಲಿ ನಡೆದ 26 ವಿರೋಧ ಪಕ್ಷಗಳ ಸಭೆಯಲ್ಲಿ ಯುಪಿಎ ಮೈತ್ರಿಕೂಟಕ್ಕೆ INDIA(ಭಾರತೀಯ ರಾಷ್ಟ್ರೀಯ ಅಭಿವೃದ್ಧಿ ಅಂತರ್ಗತ ಮೈತ್ರಿಕೂಟ) ಎಂದು ಮರುನಾಮಕರಣ ಮಾಡಲಾಗಿದೆ.

ಇದರ ಬೆನ್ನಲ್ಲೇ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಪ್ರತಿಪಕ್ಷಗಳ ಒಕ್ಕೂಟದ ಹೊಸ ಹೆಸರನ್ನು ಎಂದು ಟೀಕಿಸಿದ್ದು, ತಮ್ಮ ಟ್ವಿಟರ್ ಬಯೋದಿಂದ ಇಂಡಿಯಾ ತೆಗೆದುಹಾಕಿ ಭಾರತ ಎಂದು ಸೇರಿಸಿದ್ದಾರೆ.

‘ಚೀಫ್ ಮಿನಿಸ್ಟರ್ ಆಫ್ ಅಸ್ಸಾಂ, ಇಂಡಿಯಾ’ ಎಂದಿದ್ದ ತಮ್ಮ ಟ್ವಿಟ್ಟರ್ ಬಯೋವನ್ನು ‘ಅಸ್ಸಾಂನ ಮುಖ್ಯಮಂತ್ರಿ, ಭಾರತ್’ ಎಂದು ಬದಲಾಯಿಸಿದ್ದಾರೆ.

ಇಂಡಿಯಾ ಮರುನಾಮಕರಣ ವಿಚಾರ ಹೈವೋಲ್ಟೇಜ್ ವಿವಾದಕ್ಕೆ ತಿರುಗಿದ ನಂತರ ಶರ್ಮಾ ಭಾರತ್ ಎಂದು ಸೇರಿಸಿದರು. ಈ ಮೂಲಕ ಹಿಮಂತ್ ಅವರು ತಮ್ಮ ಟ್ವಿಟರ್ ಬಯೋಗೆ ‘ಭಾರತ್’ ಸೇರಿಸಿದ ಮೊದಲ ಬಿಜೆಪಿ ನಾಯಕರಾದರು.

ಟ್ವಿಟರ್ ಬಯೋದಿಂದ ‘ಇಂಡಿಯಾ’ ತೆಗೆದು ‘ಭಾರತ’ ಎಂದು ಬದಲಿಸಿದ ಹಿಮಂತ ಬಿಸ್ವಾ ಶರ್ಮಾ ಅವರನ್ನು ಗೇಲಿ ಮಾಡಿದ ಕಾಂಗ್ರೆಸ್ ನಾಯಕರು, ಮೇಕ್ ಇನ್ ಇಂಡಿಯಾ, ಸ್ಟಾರ್ಟ್ ಅಪ್ ಇಂಡಿಯಾ ಹೆಸರನ್ನು ಈಗ ಏನೆಂದು ಬದಲಾಯಿಸುತ್ತೀರಿ ಎಂದು ಪ್ರಶ್ನಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read