ದೇಶಾದ್ಯಂತ ವರುಣಾರ್ಭಟ ಜೋರಾಗಿದೆ. ಭಾರಿ ಮಳೆಯಿಂದಾಗಿ ಹಿಮಾಚಲಪ್ರದೇಶಾಲ್ಲಿ ಗುಡ್ಡ ಕುಸಿತವಾಗಿದ್ದು, ರಸ್ತೆಬದಿ ನಿಲ್ಲಿಸಿದ್ದ ಕಾರುಗಳು ನೀರು ಹಾಗೂ ಮಣ್ಣಿನಲ್ಲಿ ಕೊಚ್ಚಿಕೊಂಡು ಹೋಗಿವೆ.
ಹಿಮಾಚಲಪ್ರದೇಶದ ರಾಂಪುರದಲ್ಲಿ ಧಾರಾಕರಾ ಮಳೆಗೆ ಗುಡ್ದ ಕುಸಿದಿದ್ದು, ಹಲವು ಮನೆಗಳು ನೆಲಸಮವಾಗಿವೆ. ನೂರಾರು ಕಾರುಗಳು ಮಣ್ಣಿನಡಿ ಹುಡುಗಿ ಹೋಗಿವೆ. ಇನ್ನು ಹಲವು ವಾಹನಗಳು, ಕಾರುಗಳು ನೀರಿನ ರಭಸಕ್ಕೆ ಕೊಚ್ಚಿ ಹೋಗಿವೆ.
ರಾಂಪುರ ಪ್ರದೇಶದಲ್ಲಿ ಭಾರಿ ಅವಾಂತರ ಸೃಷ್ಟಿಯಾಗಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ಥಗೊಂಡಿದೆ.