HomeIndiaವಿಧಾನಸಭೆ ಚುನಾವಣೆ ನಡೆಯುವ ಕೇರಳಕ್ಕೆ ಬಂಪರ್ ಕೊಡುಗೆ ಕೊಟ್ಟ ಕೇಂದ್ರ ಸರ್ಕಾರ

ವಿಧಾನಸಭೆ ಚುನಾವಣೆ ನಡೆಯುವ ಕೇರಳಕ್ಕೆ ಬಂಪರ್ ಕೊಡುಗೆ ಕೊಟ್ಟ ಕೇಂದ್ರ ಸರ್ಕಾರ

ಕೇರಳ ವಿಧಾನಸಭೆ ಚುನಾವಣೆ-2026ರ ಹಿನ್ನಲೆಯಲ್ಲಿ ಕೇರಳ ರಾಜ್ಯಕ್ಕೆ ಕೇಂದ್ರ ಸರ್ಕಾರ ಬಂಪರ್ ಕೊಡುಗೆ ನೀಡಿದೆ. ಕೇರಳದಲ್ಲಿ ಹೊಸ ಹೈಸ್ಪೀಡ್ ರೈಲು ಕಾರಿಡಾರ್‌ಗೆ ಕೇಂದ್ರವು ಅನುಮೋದನೆ ನೀಡಿದೆ, ಇದು ರಾಜ್ಯದ ರೈಲು ಮೂಲಸೌಕರ್ಯವನ್ನು ಗಮನಾರ್ಹವಾಗಿ ಸುಧಾರಿಸುವ ನಿರೀಕ್ಷೆಯಿದೆ.

‘ಮೆಟ್ರೋ ಮ್ಯಾನ್’ ಖ್ಯಾತಿಯ ಇ.ಶ್ರೀಧರನ್ ಅವರು ಆರಂಭಿಕ ಯೋಜನಾ ಕಾರ್ಯವನ್ನು ಮುನ್ನಡೆಸುತ್ತಾರೆ. ಆದರೆ ದೆಹಲಿ ಮೆಟ್ರೋ ರೈಲು ನಿಗಮವನ್ನು ವಿವರವಾದ ಯೋಜನಾ ವರದಿ (ಡಿಪಿಆರ್) ತಯಾರಿಸಲು ನಿಯೋಜಿಸಲಾಗಿದೆ.

ಇ.ಶ್ರೀಧರನ್ ಮಾತನಾಡಿ, “ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರ ಜೊತೆ ದೆಹಲಿಯಲ್ಲಿ ಜನವರಿ 16ರಂದು ನಡೆದ ಸಭೆಯ ಬಳಿಕ ಕೇಂದ್ರದ ಅನುಮೋದನೆ ಸಿಕ್ಕಿದೆ. ಡಿಪಿಆರ್ 9 ತಿಂಗಳಲ್ಲಿ ಪೂರ್ಣಗೊಳ್ಳಲಿದೆ” ಎಂದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇ.ಶ್ರೀಧರನ್ ಈ ಹಿಂದೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರನ್ನು ಭೇಟಿಯಾಗಿ ಪ್ರಸ್ತಾಪವನ್ನು ಮಂಡಿಸಿದ್ದರು. ಈ ಯೋಜನೆಗೆ ಮುಖ್ಯಮಂತ್ರಿಗಳು ಈಗಾಗಲೇ ಅನುಮೋದನೆಯನ್ನು ನೀಡಿದ್ದಾರೆ.

“ಈ ಯೋಜನೆಯು ವಿವಾದಾತ್ಮಕ ಸಿಲ್ವರ್ ಲೈನ್ ಯೋಜನೆಯನ್ನು ಬದಲಾವಣೆ ಮಾಡಲಿದೆ. ಪ್ರಸ್ತಾವಿತ ಕಾರಿಡಾರ್ ವಿನ್ಯಾಸ ಮತ್ತು ಅನುಷ್ಠಾನ ಎರಡರಲ್ಲೂ ಬಹಳ ಭಿನ್ನವಾಗಿರುತ್ತದೆ” ಎಂದು ಇ.ಶ್ರೀಧರನ್ ವಿವರಿಸಿದ್ದಾರೆ.

“ಈ ಮಾರ್ಗದಲ್ಲಿ ಪ್ರತಿ 5 ನಿಮಿಷಗಳಿಗೊಮ್ಮೆ ರೈಲುಗಳು ಚಲಿಸುತ್ತವೆ. 20 ರಿಂದ 25 ಕಿಲೋಮೀಟರ್ ಅಂತರದಲ್ಲಿ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಲಿವೆ ಮತ್ತು ಗಂಟೆಗೆ 200 ಕಿ.ಮೀ. ವೇಗವನ್ನು ತಲುಪುತ್ತದೆ” ಎಂದು ಅವರು ಹೇಳಿದರು.

ಈ ಯೋಜನೆಯು ಪ್ರಯಾಣದ ಸಮಯವನ್ನು ಕಡಿಮೆ ಮಾಡುತ್ತದೆ ಮತ್ತು ಕೇರಳದ ಮೂಲ ಸೌಕರ್ಯ ಅಭಿವೃದ್ಧಿಗೆ ಕೊಡುಗೆ ನೀಡಲಿದೆ ಎಂದು ನಿರೀಕ್ಷಿಸಲಾಗಿದೆ. ಈ ಯೋಜನೆಗೆ ಭೂಸ್ವಾಧೀನ ಹಿಂದಿನ ಯೋಜನೆಗಳಿಗಿಂತ ತುಂಬಾ ಸುಲಭವಾಗಿದೆ ಎಂದು ನಿರೀಕ್ಷಿಸಲಾಗಿದೆ.

ಹೊಸ ಕಾರಿಡಾರ್‌ಗೆ ಸಿಲ್ವರ್ ಲೈನ್‌ಗೆ ಅಗತ್ಯವಿರುವ ಮೂರನೇ ಒಂದು ಭಾಗದಷ್ಟು ಭೂಮಿ ಮಾತ್ರ ಬೇಕಾಗುತ್ತದೆ. ಸುಮಾರು 70 ರಿಂದ 75 ಪ್ರತಿಶತದಷ್ಟು ಮಾರ್ಗ ಎತ್ತರದಲ್ಲಿಯೇ ಸಾಗಲಿದೆ. ಕೆಲವು ವಿಭಾಗಗಳು ಮಾತ್ರ ಸುರಂಗ ಮಾರ್ಗದಲ್ಲಿ ಕಾರ್ಯನಿರ್ವಹಿಸುತ್ತವೆ.

ಎತ್ತರದ ಹಳಿಗಳ ಕೆಳಗಿರುವ ಭೂಮಿಯನ್ನು ಕೃಷಿ ಅಥವಾ ಮೇಯಿಸುವಿಕೆಗಾಗಿ ಮಾಲೀಕರಿಗೆ ಗುತ್ತಿಗೆ ನೀಡಬಹುದು. ಯೋಜನೆಯ ಮೊದಲ ಹಂತವು ತಿರುವನಂತಪುರಂ- ಕಣ್ಣೂರು ವಯಾ ಕೊಲ್ಲಂ ಮತ್ತು ಇತರ ಪ್ರದೇಶಗಳ ಮೂಲಕ ಹಾದುಹೋಗಲಿದೆ.

ಈ ಕಾರಿಡಾರ್ ಅನ್ನು ಕಾಸರಗೋಡು-ಮಂಗಳೂರು ಮತ್ತು ಭವಿಷ್ಯದಲ್ಲಿ ಮುಂಬೈಗೆ ವಿಸ್ತರಿಸುವ ಯೋಜನೆಗಳಿವೆ. ಈ ಯೋಜನೆಯು ದೆಹಲಿ-ಮೀರತ್ ಮಾರ್ಗದಂತಹ ಪ್ರಾದೇಶಿಕ ಕ್ಷಿಪ್ರ ಸಾರಿಗೆ ವ್ಯವಸ್ಥೆಯ ಮಾದರಿಯನ್ನು ಆಧರಿಸಿರುತ್ತದೆ.

ಗರಿಷ್ಠ ವೇಗವು ಗಂಟೆಗೆ 200 ಕಿ.ಮೀ. ಆಗಿರುತ್ತದೆ. ಸರಾಸರಿ ಸಂಚಾರದ ವೇಗವು ಗಂಟೆಗೆ ಸುಮಾರು 135 ಕಿ.ಮೀ. ಆಗಿರುತ್ತದೆ. ಇದು ತಿರುವನಂತಪುರಂ-ಕಣ್ಣೂರು ನಡುವೆ ಈ ಮಾರ್ಗದಲ್ಲಿ ರೈಲು ಸುಮಾರು ಮೂರೂವರೆ ಗಂಟೆಗಳಲ್ಲಿ ಪ್ರಯಾಣಿಸಲಿದೆ ಎಂದು ಅಂದಾಜಿಸಲಾಗಿದೆ.

ಸದ್ಯದ ಮಾಹಿತಿ ಪ್ರಕಾರ ಈ ಯೋಜನೆಯ ಅಂದಾಜು ವೆಚ್ಚ 1 ಲಕ್ಷ ಕೋಟಿ ಆಗಿದ್ದು, ಕೊಂಕಣ ರೈಲ್ವೆ ಮಾದರಿಯನ್ನು ಅನುಸರಿಸಿ ಕೇಂದ್ರ (51 ಪ್ರತಿಶತ) ಮತ್ತು ರಾಜ್ಯ (49 ಪ್ರತಿಶತ) ಅನುದಾನ ಹಂಚಿಕೊಳ್ಳಲಿವೆ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

Most Popular