ಬೆಂಗಳೂರು: ಕರ್ನಾಟಕ ಹೈಕೋರ್ಟ್ ಗೆ 2026 ನೇ ಸಾಲಿನ ಬೇಸಿಗೆ ರಜೆ ಮೇ 4ರಿಂದ ಪ್ರಾರಂಭವಾಗಲಿದ್ದು ಮೇ 30ರವರೆಗೂ ರಜೆ ಇರುತ್ತದೆ.
ಮೇ 1ರಂದು ಶುಕ್ರವಾರ ಕಾರ್ಮಿಕ ದಿನ ಪ್ರಯುಕ್ತ ಸರ್ಕಾರಿ ರಜೆ ಇದೆ. ಮೇ 2 ಶನಿವಾರ, ಮೇ 3ರಂದು ಭಾನುವಾರ ಕೋರ್ಟ್ ಕಲಾಪ ಇರುವುದಿಲ್ಲ. ಹೀಗಾಗಿ ಮೇ 1ರಿಂದಲೇ ಹೈಕೋರ್ಟ್ ಗೆ ಬೇಸಿಗೆ ರಜೆ ಆರಂಭವಾಗಲಿದೆ.
ಮೇ 30ರವರೆಗೂ ರಜೆ ಇರಲಿದ್ದು ಬೇಸಿಗೆ ರಜೆ ಅವಧಿಯಲ್ಲಿ ತುರ್ತು ಪ್ರಕರಣಗಳ ವಿಚಾರಣೆಗೆ ಬೆಂಗಳೂರು ಹೈಕೋರ್ಟ್ ಪ್ರಧಾನ ಪೀಠ, ಧಾರವಾಡ ಮತ್ತು ಕಲಬುರಗಿ ಪೀಠಗಳಲ್ಲಿ ರಜಾ ಕಾಲದ ವಿಶೇಷ ಕಲಾಪಗಳು ನಡೆಯಲಿವೆ.
ಮೇ 5, 7, 12, 14, 19, 21, 26 ಮತ್ತು 29ರಂದು ರಜಾ ಕಾಲದ ಪೀಠಗಳಲ್ಲಿ ತುರ್ತು ಪ್ರಕರಣಗಳ ವಿಚಾರಣೆ ನಡೆಸಲಾಗುವುದು ಎಂದು ಹೇಳಲಾಗಿದೆ.

