HomeEntertainment'ಹೆಜ್ಜಾರು' ಸಿನಿಮಾದ ''ಚಿತ್ರಮಂಜರಿ'' ಹಾಡು ರಿಲೀಸ್

‘ಹೆಜ್ಜಾರು’ ಸಿನಿಮಾದ ”ಚಿತ್ರಮಂಜರಿ” ಹಾಡು ರಿಲೀಸ್

ಹರ್ಷ ಪ್ರಿಯ ನಿರ್ದೇಶನದ ‘ಹೆಜ್ಜಾರು’ ಚಿತ್ರದ ವಿಡಿಯೋ ಹಾಡೊಂದನ್ನು ರಾಮ್ ಜಿ ರಿದಮ್ಸ್ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದೆ. ”ಚಿತ್ರಮಂಜರಿ” ಎಂಬ ಈ ಹಾಡಿಗೆ ನಟ ಶರಣ್ ಹಾಗೂ ಪೃಥ್ವಿ ಭಟ್ ಧ್ವನಿಯಾಗಿದ್ದು, ಹರ್ಷ ಪ್ರಿಯ ಸಾಹಿತ್ಯ ಹಾಗೂ ಪೂರ್ಣ ಚಂದ್ರ ತೇಜಸ್ವಿ ಅವರ ಸಂಗೀತವಿದೆ.

ಈ ಚಿತ್ರವನ್ನು ಗಗನ ಎಂಟರ್ಪ್ರೈಸಸ್ ಬ್ಯಾನರ್ ನಲ್ಲಿ ವಿಮಲಾ ಎನ್ ನಿರ್ಮಾಣ ಮಾಡಿದ್ದು, ಸುನಿತಾ ಟಿ ಆರ್ ಸಹ ನಿರ್ಮಾಪಕರಾಗಿ ಕೆಲಸ ಮಾಡಿದ್ದಾರೆ. ಭಗತ್ ಹಲ್ವಾ ಸೇರಿದಂತೆ ಲಿಯೋನಿಲಾ ಶ್ವೇತಾ ಡಿಸೋಜಾ, ಗೋಪಾಲಕೃಷ್ಣ ದೇಶಪಾಂಡೆ, ನವೀನ್ ಕೃಷ್ಣ, ಅರುಣಾ ಬಾಲರಾಜ್, ಮುನಿರಾಜ್, ತೆರೆ ಹಂಚಿಕೊಂಡಿದ್ದಾರೆ. ಅಜಿತ್ ಡ್ರಾಕುಲಾ ಸಂಕಲನ, ಅಮರ್ ಗೌಡ ಛಾಯಾಗ್ರಹಣ, ಹಾಗೂ ಭಜರಂಗಿ ಮೋಹನ್ ನೃತ್ಯ ನಿರ್ದೇಶನವಿದೆ.

For Latest News Updates, Join Our Whatsapp Community🚩
RELATED ARTICLES

Most Popular