ಕಣ್ಣಿನ ಸಮಸ್ಯೆಗಳ ʼಪರಿಹಾರʼಕ್ಕೆ ಇಲ್ಲಿದೆ ಮಾರ್ಗ

ಮುಖಕ್ಕೆ ಕಣ್ಣೇ ಭೂಷಣ. ಕಣ್ಣಿನ ಎಲ್ಲಾ ಸಮಸ್ಯೆಗಳನ್ನು ಸುಲಭವಾಗಿ ಪರಿಹರಿಸಬಹುದು. ಕಣ್ಣಿನಿಂದ ನೀರು ಬರುವುದು, ಕಣ್ಣು ಕೆಂಪಾಗುವುದು ಮೊದಲಾದ ಹಲವಾರು ಸಮಸ್ಯೆಗಳಿಗೆ ಡ್ರಾಪ್ಸ್ ಹಾಕಿಕೊಳ್ಳುವುದನ್ನು ಬಿಟ್ಟು ಬಿಡಿ.

ಇದಕ್ಕೆ ಬೇಕಾಗಿರುವುದು 3 ರಿಂದ 4 ಕ್ಯಾರೆಟ್. ಇದನ್ನು ತೊಳೆದು ಸಿಪ್ಪೆ ತೆಗೆದು ಸಣ್ಣಗೆ ಹೆಚ್ಚಿ. ತುಸುವೇ ನೀರು ಬಳಸಿ ರುಬ್ಬಿ. ನಂತರ ಫಿಲ್ಟರ್ ಮಾಡಿ ಅದಕ್ಕೆ ಅರ್ಧ ಹೋಳು ನಿಂಬೆ ಹಣ್ಣಿನ ರಸ ಹಾಕಿ. 2 ರಿಂದ 3 ಟೀ ಸ್ಪೂನ್ ಜೇನುತುಪ್ಪ ಹಾಕಿ. ಚೆನ್ನಾಗಿ ಕಲಕಿ. ಇದನ್ನು ಪ್ರತಿ ದಿನ ಬೆಳಗ್ಗೆ ತಿಂಡಿಗಿಂತ 1 ಗಂಟೆ ಮುಂಚೆ ಕುಡಿಯಿರಿ.

2 ಕರಿಬೇವು, ಒಂದು ಹಿಡಿಯಷ್ಟು ನುಗ್ಗೆ ಸೊಪ್ಪನ್ನು ರುಬ್ಬಿ. ನಿಂಬೆ ಹಣ್ಣಿನ ರಸ ಹಾಕಿ. ಎರಡರಿಂದ 3 ಟೀ ಸ್ಪೂನ್ ಜೇನುತುಪ್ಪ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಸಂಜೆ ಸಮಯದಲ್ಲಿ ಕುಡಿಯಿರಿ.

ಟಿವಿ ನೋಡುವಾಗ ನಿಮಗೂ ಟಿವಿ ಗೂ 6 ಅಡಿ ದೂರ ಇರಲಿ. ಟಿವಿ ಕಲರ್ ಆದಷ್ಟು ಕಡಿಮೆ ಮಾಡಿ. ನಿದ್ದೆ ಮಾಡುವ ಒಂದು ಗಂಟೆ ಮುಂಚೆ ಫೋನ್ ಅನ್ನು ಪಕ್ಕಕ್ಕೆ ಇಟ್ಟುಬಿಡಿ. ಅಂದರೆ ನೀವು ಮಲಗುವ ಜಾಗಕ್ಕಿಂತ ತುಂಬಾ ದೂರ ಇಟ್ಟುಬಿಡಿ. ಮಕ್ಕಳಿಗೆ ಫೋನ್, ಟ್ಯಾಬ್ ಕೊಡಬೇಡಿ. ಮೇಲೆ ತಿಳಿಸಿರುವ ಎರಡೂ ಜ್ಯೂಸ್ ಅನ್ನು ಪ್ರತಿ ದಿನ, ಮೂರರಿಂದ ನಾಲ್ಕು ತಿಂಗಳು ಕೊಡಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read