HomeRecipiesಇಲ್ಲಿದೆ ಟೇಸ್ಟಿ ಟೇಸ್ಟಿ ʼಮಶ್ರೂಮ್ ಫ್ರೈʼ ತಯಾರಿಸುವ ವಿಧಾನ

ಇಲ್ಲಿದೆ ಟೇಸ್ಟಿ ಟೇಸ್ಟಿ ʼಮಶ್ರೂಮ್ ಫ್ರೈʼ ತಯಾರಿಸುವ ವಿಧಾನ

ಬೇಕಾಗುವ ಸಾಮಾಗ್ರಿಗಳು: ಮಶ್ರೂಮ್ 1 ಕಪ್, ಶುಂಠಿ ಚಿಕ್ಕ ತುಂಡು, ಹಸಿ ಮೆಣಸಿನಕಾಯಿ 6, ಬೆಳ್ಳುಳ್ಳಿ 7 ಎಸಳು, ಖಾರದ ಪುಡಿ 1 ಚಮಚ, ಅರಿಶಿನ ಪುಡಿ ಅರ್ಧ ಚಮಚ, ಗರಂ ಮಸಾಲ 1 ಚಮಚ, ಕಾಳುಮೆಣಸಿನ ಪುಡಿ ಅರ್ಧ ಚಮಚ, ಈರುಳ್ಳಿ ಹೆಚ್ಚಿದ್ದು 1, ಟೊಮಾಟೊ ಹೆಚ್ಚಿದ್ದು 2, ಉಪ್ಪು ರುಚಿಗೆ ತಕ್ಕಷ್ಟು, ಎಣ್ಣೆ ಮತ್ತು ಕರಿಬೇವು ಒಗ್ಗರಣೆ ಮಾಡಲು.

ತಯಾರಿಸುವ ವಿಧಾನ: ಶುಂಠಿ, ಹಸಿ ಮೆಣಸಿನಕಾಯಿ, ಬೆಳ್ಳುಳ್ಳಿ ಮಿಕ್ಸ್ ಮಾಡಿ, ಪೇಸ್ಟ್ ಮಾಡಿಕೊಳ್ಳಿ. ಪಾನ್ ನಲ್ಲಿ ಎಣ್ಣೆ ಹಾಕಿ ಕಾದ ನಂತರ ಮೇಲೆ ಹೇಳಿದ ಪೇಸ್ಟ್, ಖಾರದ ಪುಡಿ, ಅರಿಶಿನ ಪುಡಿ, ಗರಂ ಮಸಾಲ, ಕಾಳುಮೆಣಸಿನ ಪುಡಿ, ಈರುಳ್ಳಿ ಎಲ್ಲಾ ಹಾಕಿ ಮಿಕ್ಸ್ ಮಾಡಿ ಪಾನ್ ನಲ್ಲಿ ಹುರಿಯಿರಿ.

ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಕುದಿ ಬಂದ ನಂತರ ಮಶ್ರೂಮ್ ಹಾಕಿ. ಸ್ವಲ್ಪ ಹೊತ್ತು ಸಣ್ಣ  ಉರಿಯಲ್ಲಿ ಬೇಯಿಸಿಕೊಂಡು ನೀರು ಇಂಗಿದ ಮೇಲೆ ಗ್ರೇವಿ ಗಟ್ಟಿಯಾದೊಡನೆ ಇಳಿಸಿ. ಈಗ ಬಡಿಸಲು ಸಿದ್ಧ ಮಶ್ರೂಮ್ ಫ್ರೈ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular