HomeRecipiesಇಲ್ಲಿದೆ ʼಕ್ಯಾರೆಟ್ ಬಾತ್ʼ ಸುಲಭವಾಗಿ ಮಾಡುವ ವಿಧಾನ

ಇಲ್ಲಿದೆ ʼಕ್ಯಾರೆಟ್ ಬಾತ್ʼ ಸುಲಭವಾಗಿ ಮಾಡುವ ವಿಧಾನ

ಕ್ಯಾರೇಟ್ ಅನ್ನು ನಾವು ಹೆಚ್ಚಾಗಿ ಪಲಾವ್ ಮಾಡುವಾಗ ಬಳಸುತ್ತೇವೆ. ಪಲಾವಿನ ರುಚಿಗೆ ಇನ್ನಷ್ಟು ಮೆರಗು ನೀಡುವುದು ಕ್ಯಾರೇಟ್. ಅಂತೆಯೇ ಕ್ಯಾರೇಟ್ ಬಾತ್ ಕೂಡ ಅಷ್ಟೇ ರುಚಿಕರ. ಮಾಡುವುದು ಕೂಡ ಅತಿ ಸುಲಭ.

ಬೇಕಾಗುವ ಸಾಮಗ್ರಿಗಳು:
ಅನ್ನ, ಕ್ಯಾರೇಟ್, ಈರುಳ್ಳಿ, ಹಸಿ ಮೆಣಸಿನಕಾಯಿ, ಕರಿಬೇವು, ಕೊತ್ತಂಬರಿ ಸೊಪ್ಪು, ಲಿಂಬೆಹಣ್ಣು, ಶುಂಠಿ, ಎಣ್ಣೆ, ಉದ್ದಿನಬೇಳೆ, ಸಾಸಿವೆ, ಶೇಂಗಾ, ಅರಿಶಿಣ, ಉಪ್ಪು ಹಾಗೂ ಸಕ್ಕರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮಾಡುವ ವಿಧಾನ:

ಕ್ಯಾರೇಟಿನ ಸಿಪ್ಪೆ ತೆಗೆದುಕೊಂಡು ತುರಿದುಕೊಳ್ಳಬೇಕು. ನಂತರ ಒಂದು ಬಾಣಲೆಗೆ ಎಣ್ಣೆ, ಸಾಸಿವೆ, ಉದ್ದಿನ ಬೇಳೆ, ಶೇಂಗಾ, ಹಸಿ ಮೆಣಸು, ಶುಂಠಿ, ಅರಿಶಿಣ, ಕರಿಬೇವು ಹಾಕಿ ಒಗ್ಗರಣೆ ಸಿದ್ಧ ಮಾಡಿಕೊಳ್ಳಬೇಕು. ಸಿದ್ದಪಡಿಸಿಕೊಂಡ ಕ್ಯಾರೇಟ್ ತುರಿಯನ್ನು ಹಾಗೂ ಈರುಳ್ಳಿಯನ್ನು ಒಗ್ಗರಣೆಗೆ ಹಾಕಿ ಹುರಿಯಬೇಕು.

ಕ್ಯಾರೇಟ್ ಚೆನ್ನಾಗಿ ಹುರಿದ ನಂತರ ಅನ್ನ, ಉಪ್ಪು, ಸಕ್ಕರೆ, ಲಿಂಬೆ ರಸ ಹಾಗೂ ಕೊತ್ತಂಬರಿ ಸೊಪ್ಪನ್ನು ಹಾಕಿ ಚೆನ್ನಾಗಿ ಕಲಸಬೇಕು. ಇಷ್ಟಾದರೆ ರುಚಿಕರ ಕ್ಯಾರೇಟ್ ಬಾತ್ ರೆಡಿ.

For Latest News Updates, Join Our Whatsapp Community🚩
RELATED ARTICLES

Most Popular