HomeLatest Newsಕಪ್ ಗಳಲ್ಲಿ ಉಳಿದ ಕಲೆ ಹೋಗಲಾಡಿಸಲು ಇಲ್ಲಿದೆ ʼಉಪಾಯʼ

ಕಪ್ ಗಳಲ್ಲಿ ಉಳಿದ ಕಲೆ ಹೋಗಲಾಡಿಸಲು ಇಲ್ಲಿದೆ ʼಉಪಾಯʼ

ಕಾಫಿ, ಟೀ ಕಲೆಗಳು ಯಾವುದರ ಮೇಲೆ ಬಿದ್ದರೂ ಸುಲಭವಾಗಿ ಹೋಗುವುದಿಲ್ಲ. ಟೀ ಹಾಕುವ ಲೋಟ, ಕಪ್, ಸಾಸರ್ ಗಳನ್ನು ಕೂಡ ಎಷ್ಟೇ ತೊಳೆದರೂ ಕಂದು ಬಣ್ಣದ ಕಲೆಗಳು ಹಾಗೆಯೇ ಉಳಿದು ಬಿಡುತ್ತದೆ.

ಹಾಗಾಗಿ ಯಾರಾದರೂ ಅತಿಥಿಗಳು ಬಂದಾಗ ಈ ಕಪ್ ಗಳಲ್ಲಿ ಅವರಿಗೆ ಕಾಫಿ ಕೊಡಲು ಮುಜುಗರವಾಗುತ್ತದೆ. ಇಂಥ ಹಟಮಾರಿ ಕಲೆಗಳನ್ನು ಸುಲಭವಾಗಿ ಹೋಗಲಾಡಿಸಲು ಇಲ್ಲಿದೆ ಕೆಲವು ಟಿಪ್ಸ್.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

* ಬೇಕಿಂಗ್ ಸೋಡಾ ಅಥವಾ ವಿನಿಗರ್ ಬೆರೆಸಿದ ಬಿಸಿ ನೀರಿನಲ್ಲಿ ಕಲೆಯಾಗಿರುವ ಕಪ್ ಗಳನ್ನು ನೆನೆಸಿಟ್ಟು ನಂತರ ತೊಳೆದರೆ ಕಲೆಗಳು ನಿವಾರಣೆಯಾಗುತ್ತವೆ.

* ಒದ್ದೆ ಬಟ್ಟೆಯನ್ನು ಉಪ್ಪಿನಲ್ಲಿ ಅದ್ದಿ ಕಾಫಿ ಅಥವಾ ಚಹಾ ಕಲೆಯನ್ನು ಒರೆಸಿದರೆ ಅವು ಮರೆಯಾಗುತ್ತವೆ.

* ಬಿಸಿ ನೀರಿಗೆ ಅರ್ಧ ಕಪ್ ನಿಂಬೆರಸ ಸೇರಿಸಿ ಅದರಲ್ಲಿ ಕಲೆಗಳಿರುವ ಕಪ್ ಗಳನ್ನು ಒಂದು ರಾತ್ರಿ ನೆನೆಸಿಟ್ಟು ಮರುದಿನ ತೊಳೆದರೆ ಕಲೆಗಳು ಮಾಯವಾಗುತ್ತವೆ.

* ಬೇಕಿಂಗ್ ಸೋಡಾ ಮತ್ತು ನಿಂಬೆರಸ ಬೆರೆಸಿ ಕಲೆಯ ಮೇಲೆ ಹಚ್ಚಿ ಒರೆಸಿದರೂ ಈ ಕಲೆಗಳು ನಿವಾರಣೆಯಾಗುತ್ತದೆ.

For Latest News Updates, Join Our Whatsapp Community🚩
RELATED ARTICLES

Most Popular