ಒಡೆದ ಹಿಮ್ಮಡಿ ಸಮಸ್ಯೆಗೆ ಇಲ್ಲಿದೆ ಪರಿಹಾರ

ಹಿಮ್ಮಡಿ ಬಿರುಕು ಸೌಂದರ್ಯವನ್ನು ಹಾಳು ಮಾಡುವುದೊಂದೇ ಅಲ್ಲ ನೋವಿಗೆ ಕಾರಣವಾಗುತ್ತದೆ. ಹಿಮ್ಮಡಿ ಬಿರುಕು ಬಿಟ್ಟು ಅಲ್ಲಿಂದ ರಕ್ತ ಬರುವುದುಂಟು. ಹಿಮ್ಮಡಿ ಬಿರುಕಿಗೆ ಮಾರುಕಟ್ಟೆಯಲ್ಲಿ ಅನೇಕ ಔಷಧಿಗಳಿವೆ. ಆದ್ರೆ ನಿಂಬು ನಿಮ್ಮೆಲ್ಲ ಸಮಸ್ಯೆಗೆ ಪರಿಹಾರ ಸೂಚಿಸುತ್ತದೆ.

ಒಂದು ಚಮಚ ವ್ಯಾಸಲಿನ್ ತೆಗೆದುಕೊಳ್ಳಿ. ಅದಕ್ಕೆ ನಿಂಬೆ ಹಣ್ಣಿನ ರಸವನ್ನು ಬೆರೆಸಿ. ರಾತ್ರಿ ಮಲಗುವ ಮೊದಲು ಕಾಲನ್ನು ಸ್ವಚ್ಛವಾಗಿ ತೊಳೆದು ಹಿಮ್ಮಡಿಗೆ ಈ ಮಿಶ್ರಣವನ್ನು ಹಚ್ಚಿ. ಬೆಳಿಗ್ಗೆ ನೀರಿನಲ್ಲಿ ಕಾಲನ್ನು ತೊಳೆದುಕೊಳ್ಳಿ. ಕೆಲ ದಿನಗಳಲ್ಲಿಯೇ ನಿಮ್ಮ ಹಿಮ್ಮಡಿ ಕೋಮಲವಾಗಲಿದೆ.

ರಾತ್ರಿ ಮಲಗುವ ಮುನ್ನ ನಿಂಬೆ ಹಣ್ಣನ್ನು ಕತ್ತರಿಸಿ ಹಿಮ್ಮಡಿಗೆ ರಬ್ ಮಾಡಿ. ಬೆಳಿಗ್ಗೆ ಎದ್ದ ತಕ್ಷಣ ಬೆಚ್ಚಗಿನ ನೀರಿನಲ್ಲಿ ಕಾಲನ್ನು ಸ್ವಚ್ಛಗೊಳಿಸಿಕೊಳ್ಳಿ. ಪ್ರತಿದಿನ ಹೀಗೆ ಮಾಡುತ್ತ ಬಂದಲ್ಲಿ ನೋವು ಕಡಿಮೆಯಾಗಿ ಬಿರುಕಿನ ಸಮಸ್ಯೆ ದೂರವಾಗುತ್ತದೆ.

ಇದ್ರ ಜೊತೆಗೆ ತೆಂಗಿನ ಎಣ್ಣೆಯನ್ನು ಬಿರುಕಿಗೆ ಹಚ್ಚಿ. ಸಾಕ್ಸ್ ಹಾಕಿ ಮಲಗಿ. ಬೆಳಿಗ್ಗೆ ಎದ್ದ ತಕ್ಷಣ ಬೆಚ್ಚಗಿನ ನೀರಿನಲ್ಲಿ ಕಾಲು ತೊಳೆಯಿರಿ. 10 ದಿನ ನಿರಂತರವಾಗಿ ಹೀಗೆ ಮಾಡುತ್ತ ಬಂದಲ್ಲಿ ಬಿರುಕಿನ ಸಮಸ್ಯೆ ಮಾಯವಾಗುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read