ಮಾರುತಿ ಸುಜುಕಿಯ ಜಿಮ್ನಿ 5 ಬಾಗಿಲಿನ ಸ್ಪೆಷಲ್ ಕಾರು: ಇಲ್ಲಿದೆ ಬೆಲೆ ಸೇರಿದಂತೆ ಇತರೆ ಮಾಹಿತಿ

ಭಾರತದಲ್ಲಿ ಅತಿ ಹೆಚ್ಚು ಮಾರಾಟವಾಗುವ ಮತ್ತು ಅತಿ ದೊಡ್ಡ ವಾಹನ ತಯಾರಕ ಸಂಸ್ಥೆಗಳಲ್ಲಿ ಮಾರುತಿ ಸುಜುಕಿ ಕಂಪನಿ ಒಂದು. ಇದೇ ಕಂಪನಿ ಈಗ ಜಿಮ್ನಿ ಹೆಸರಿನ ವಾಹನವೊಂದನ್ನ ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು, ಇದೊಂದು ವಿಭಿನ್ನ ಬಗೆಯ ಕಾರು ಆಗಿದೆ. ಇದಕ್ಕೆ 5 ಬಾಗಿಲುಗಳಿದ್ದು, ಇದರ ಬೆಲೆ 10 ಲಕ್ಷಕ್ಕೂ ಕಡಿಮೆ ಇರಲಿದೆ ಎಂದು ಕಂಪನಿ ಹೇಳಿದೆ.

ಸುಜುಕಿ ಕಂಪನಿಯ ಈ ವಿಶೇಷ ಕಾರು, ಅಟೋಮ್ಯಾಟಿಕ್ ಅಲ್ಪಾವೆರಿಯಂಟ್ ಡಿಸೈನ್‌ನಲ್ಲಿ ರೂಪಗೊಂಡಿದ್ದು, ಇನ್ನೆರಡು ತಿಂಗಳಲ್ಲೇ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ. 4-ಸ್ಪೀಡ್ ಆಟೋಮೋಟಿಕ್ ಟ್ರಾನ್ಸ್‌ಮಿಷನ್ ಜೊತೆಗೆ ಈ ಕಾರು ಬರಲಿದೆ. ಇದರಲ್ಲಿ ಸೆಂಡರ್ಡ್ ರೂಪದಲ್ಲಿ4×4 ಡಾಇವೆಟನ್ ಅಳವಡಿಸಲಾಗಿದೆ. ಇನ್ನೂ ಸಾಮಾನ್ಯವಾಗಿ ಮಾರುತಿ ಕಂಪನಿಗಳ ಕಾರುಗಳಲ್ಲಿ ಬರುವಂತಹ 5-ಸ್ಪೀಡ್ ಮೆನುವಲ್‌ ಗಿಯರ್‌ಬಾಕ್ಸ್ ಕೂಡ ಸಿಗಲಿದೆ. ಇದೆಲ್ಲದರ ಜೊತೆಗೆ 103 ಬಿಎಚ್‌ಪಿಯ ಪವರ್‌ ಜನರೆಟ್ ಮಾಡುವ 1.5 ಲೀಟರ್ ಪೆಟ್ರೋಲ್ ಎಂಜಿನ್ ಇದರಲ್ಲಿರುವುದು ವಿಶೇಷವಾಗಿದೆ.

ಈ ಜಿಮ್ಮಿಗೆ ಲೈಡರ್ ಪ್ರೈಮ್ ಚೆಸಿಸ್‌ನಿಂದ ಅದ್ಭುತ ರೂಪ ಕೊಡಲಾಗಿದೆ. 3-ಲಿಂಕ್ ಹಾರ್ಡ್ ಎಕ್ಸಲ್ ಸಸ್ಪೆಂಶನ್ ಮತ್ತು ಕಡಿಮೆ ರೆಂಜ್ ಟ್ರಾನ್ಸಫರ್ ಗಿಯರ್‌ ಜೊತೆಗೆ ALLGRIP PRO (4WD) ಹೊಸ ಟೆಕ್ನಾಲಾಜಿಯನ್ನ ಅಳವಡಿಸಲಾಗಿದೆ.

ಇದೆಲ್ಲದರ ಜೊತೆ ಜೊತೆಗೆ ಎಸ್‌ಯೂವಿ ನಲ್ಲಿ ಇಂಫೊಟೆನಮೆಂಟ್‌ಗಾಗಿ ಹೆಚ್‌ಡಿ ಡಿಸ್ಕ್ 22.86 ಸೆಮಿಯನ್ನ ಕೊಡಲಾಗಿದೆ. ಸ್ಮಾರ್ಟ್ ಫೆ ಪ್ರೊ+ ಇಂಫೊಟೆನೆಂಟ್ ಸಿಸ್ಟಮ್‌ನ್ನ ಕೂಡ ಅಳವಡಿಸಲಾಗಿದೆ. ಇನ್ನೂ ಸೋರ್ಟ್‌ಗಾಗಿಯೇ ಇಎಸ್‌ಪಿ, ಹಿಲ್ ಡಿಸೆಂಟ್ ಕಂಟ್ರೋಲ್‌, ರಿಯರ- ಕೆಮರಾ ಮತ್ತು ಇಬಿಡಿ ಹಾಗೂ ಎಬಿಎಸ್ ನಂತರ ಅತ್ಯಾಧುನಿಕ ಟೆಕ್ನಾಲಾಜಿಯನ್ನ ಈ ಕಾರಿನಲ್ಲಿ ನೋಡಬಹುದು. 5 ಬಾಗಿಲು ಇರುವ ಈ ಕಾರು ಇಷ್ಟು ಕಡಿಮೆ ಬೆಲೆಗೆ ಸಿಗುವುದೇ ವಿಶೇಷ. ಆದ್ದರಿಂದ ಇದನ್ನ ಕೊಂಡು ಕೊಳ್ಳಬೇಕೆಂದವರು ಇನ್ನೂ ಕೆಲವೇ ಕೆಲ ದಿನಗಳ ನಂತರ ಭಾರತದ ಶೋರೂಮ್ ಗಳಲ್ಲಿ ಈ ಕಾರುಗಳನ್ನ ನೋಡಬಹುದಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read