ಒತ್ತಡ, ತಲೆನೋವು ನಿವಾರಣೆಗೆ ಇಲ್ಲಿದೆ ಸರಳ ‘ಉಪಾಯ’

ಮನುಷ್ಯ ಅಂದ್ಮೇಲೆ ಸಮಸ್ಯೆಗಳು ಕಾಮನ್. ಪ್ರತಿಯೊಬ್ಬರಿಗೂ ತಮ್ಮದೇ ಆದ  ಕಚೇರಿ ಅಥವಾ ಮನೆಯ  ಸಮಸ್ಯೆಗಳಿರುತ್ತೆ. ಈ ಸಮಸ್ಯೆಗಳು ಮಾನಸಿಕವಾಗಿ ಹೆಚ್ಚಿನ ಒತ್ತಡವನ್ನು, ಖಿನ್ನತೆಯನ್ನು ಉಂಟುಮಾಡುತ್ತದೆ. ಸರಿಯಾದ ಸಮಯಕ್ಕೆ ಊಟ ತಿಂಡಿ  ಮಾಡದೆ ಇರೋದು, ಹೆಚ್ಚಿನ ಒತ್ತಡದಲ್ಲಿ ಕೆಲಸ ಮಾಡೋದು ಮಿದುಳಿಗೆ ಮತ್ತು  ನಿದ್ರೆಯ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ.

ನಿದ್ರಾಹೀನತೆಯಿಂದ ಒತ್ತಡದ ಮಟ್ಟವು ಹೆಚ್ಚಾಗುತ್ತಾ ಹೋಗುತ್ತದೆ. ಇದ್ರಿಂದ ಸಮಸ್ಯೆಗಳು ಶುರು ಆಗುತ್ತವೆ. ಯಾವುದೇ ಒತ್ತಡದಿಂದ ಅಥವಾ ಟೆನ್ಶನ್ ನಿಂದ  ಹೊರಬರಲು ಇಲ್ಲಿದೆ ಟಿಪ್ಸ್.

ನೀವು ಸಮಸ್ಯೆಗಳಿಂದ ಹೆಚ್ಚು ದೂರವಾಗಲು ಪ್ರಯತ್ನಿಸಿದಷ್ಟು ಅದು ನಿಮ್ಮ ಹಿಂದೆ ಬರುತ್ತದೆ. ಹಾಗಾಗಿ ನಿಮಗೆ ಒತ್ತಡವನ್ನು ಉಂಟುಮಾಡುವ ವಿಷಯಗಳನ್ನು ಎದುರಿಸಲು ಕಲಿಯಿರಿ. ನಿಮ್ಮ ಮಾನಸಿಕ ಸ್ಥೈರ್ಯದ ಮುಂದೆ ಒತ್ತಡವು ತುಂಬಾ ಚಿಕ್ಕದೆಂದು ಭಾವಿಸಿ ಮತ್ತು  ನಿಮ್ಮ ಮನಸಿನ ಮೇಲೆ ಹಿಡಿತ ಸಾಧಿಸಿ. ಸ್ವಲ್ಪ ಹೊತ್ತು ಧ್ಯಾನ ಮಾಡಿ.

ಸಮಯ ಸಿಕ್ಕಾಗ ವಾಕಿಂಗ್ ಮಾಡಿ. ತೊಂದರೆ ಎದುರಾದಾಗ ಭಯಪಡದೆ  ಶಾಂತಚಿತ್ತದಿಂದ ಸಮಸ್ಯೆಯನ್ನು ನಿವಾರಿಸಿಕೊಳ್ಳಿ. ಸಕಾರಾತ್ಮಕ ಚಿಂತನೆ ಒತ್ತಡವನ್ನು ಹೋಗಲಾಡಿಸುವ ಅತ್ಯುತ್ತಮ ಔಷಧವಾಗಿದೆ ಮತ್ತು ಆತ್ಮವಿಶ್ವಾಸವನ್ನು ಬಲಪಡಿಸುತ್ತದೆ. ಬಾಳೆಹಣ್ಣು, ದಾಳಿಂಬೆ, ಟೊಮೆಟೊ, ಕಿತ್ತಳೆ ಹಣ್ಣು  ಒತ್ತಡವನ್ನು ಕಡಿಮೆ ಮಾಡಲು ನೆರವಾಗುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read