HomeBeautyತ್ವಚೆಯ ರಂಧ್ರಗಳಲ್ಲಿನ ಕೊಳೆ ತೆಗೆಯಲು ಇಲ್ಲಿದೆ ಮನೆ ಮದ್ದು

ತ್ವಚೆಯ ರಂಧ್ರಗಳಲ್ಲಿನ ಕೊಳೆ ತೆಗೆಯಲು ಇಲ್ಲಿದೆ ಮನೆ ಮದ್ದು

ನಿಮ್ಮ ಮುಖದ ತ್ವಚೆಯಲ್ಲಿ ಕಣ್ಣಿಗೆ ಕಾಣಿಸದಷ್ಟು ಸಣ್ಣ ರಂಧ್ರಗಳಿರುತ್ತವೆ. ಇವುಗಳಲ್ಲಿ ಕೊಳೆ ಕುಳಿತಾಕ್ಷಣ ಮುಖದಲ್ಲಿ ಮೊಡವೆ, ಬ್ಲಾಕ್ ಹೆಡ್ ಅಥವಾ ಗುಳ್ಳೆಗಳು ಕಾಣಿಸಿಕೊಂಡು ನಿಮ್ಮ ತ್ವಚೆಯ ಸೌಂದರ್ಯವನ್ನೇ ಹಾಳು ಮಾಡುತ್ತವೆ. ಈ ರಂಧ್ರಗಳಲ್ಲಿ ಕುಳಿತ ಕೊಳೆಯನ್ನು ಹೀಗೆ ಹೋಗಲಾಡಿಸಿ.

ಸ್ವಲ್ಪ ಓಟ್ ಮೀಲ್ಸ್ ಅನ್ನು ಬೇಯಿಸಿ. ಅದಕ್ಕೆ ಒಂದು ಚಮಚ ಆಲಿವ್ ಎಣ್ಣೆ ಸೇರಿಸಿ. ಇದನ್ನು ಮುಖ ಹಾಗೂ ಕತ್ತಿನ ಭಾಗಕ್ಕೆ ಹಚ್ಚಿ. ಮೃದುವಾಗಿ ಮಸಾಜ್ ಮಾಡಿ. ಹದಿನೈದು ನಿಮಿಷಗಳ ಬಳಿಕ ಕಾಟನ್ ಬಟ್ಟೆಯಿಂದ ಒರೆಸಿ ತೆಗೆಯಿರಿ. ತಣ್ಣೀರಿನಿಂದ ಮುಖ ತೊಳೆಯಿರಿ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮೊಟ್ಟೆಯ ಹಳದಿ ಭಾಗಕ್ಕೆ ಜೇನುತುಪ್ಪ ಸೇರಿಸಿ ಚೆನ್ನಾಗಿ ಕಲಸಿ. ಬಳಿಕ ಮುಖ ಹಾಗೂ ಕುತ್ತಿಗೆಯ ಭಾಗಕ್ಕೆ ಹಚ್ಚಿ ಮಸಾಜ್ ಮಾಡಿ. 20 ನಿಮಿಷಗಳ ಬಳಿಕ ತಣ್ಣೀರಿನಿಂದ ತೊಳೆಯಿರಿ. ಒಣ ತ್ವಚೆಯ ಸಮಸ್ಯೆ ನಿವಾರಣೆ ಆಗುವುದರೊಂದಿಗೆ ರಂಧ್ರಗಳೂ ಸ್ವಚ್ಛವಾಗಿ ಮುಖ ಹೊಳಪು ಪಡೆಯುತ್ತದೆ.

ಅಡುಗೆ ಸೋಡಾಗೆ ತುಸು ನೀರು ಬೆರೆಸಿ ಪೇಸ್ಟ್ ತಯಾರಿಸಿ. ಮುಖಕ್ಕೆ ಹಚ್ಚಿ ಮೃದುವಾಗಿ ರುಬ್ಬಿ. ಬಳಿಕ ನೀರಿನಿಂದ ತೊಳೆದರೆ ಮುಖ ಹೊಳೆಯುತ್ತದೆ. ಇವೆಲ್ಲವೂ ಮನೆಯಲ್ಲೇ ಮಾಡಬಹುದಾದ ಫೇಸ್ ಪ್ಯಾಕ್ ಗಳಾಗಿದ್ದು ವಾರದಲ್ಲಿ ಎರಡು ಬಾರಿ ಮಾಡುವುದರಿಂದ ಅತ್ಯುತ್ತಮ ಪರಿಣಾಮವನ್ನು ಪಡೆಯಬಹುದು.

For Latest News Updates, Join Our Whatsapp Community🚩
RELATED ARTICLES

Most Popular