HomeHealthಉರಿ ಮೂತ್ರ ತೊಂದರೆಗೆ ಇಲ್ಲಿದೆ ಮನೆ ಮದ್ದು

ಉರಿ ಮೂತ್ರ ತೊಂದರೆಗೆ ಇಲ್ಲಿದೆ ಮನೆ ಮದ್ದು

ನೀರಿನಂಶ ಹೆಚ್ಚಿರುವ ಹಣ್ಣು, ತರಕಾರಿಗಳನ್ನು ಬಳಸುವುದು ಆರೋಗ್ಯಕ್ಕೆ ಉತ್ತಮ. ಕಿತ್ತಳೆ, ಕಲ್ಲಂಗಡಿ, ಸೌತೆಕಾಯಿ ಇವೇ ಮೊದಲಾದ ಹಣ್ಣು ತರಕಾರಿಗಳು ದೇಹದಲ್ಲಿ ನೀರಿನಂಶ ಹೆಚ್ಚಿಸುತ್ತವೆ.

ಕಲ್ಲಂಗಡಿ ಹೆಚ್ಚು ದೊರೆಯುವುದರಿಂದ ಹಾಗೂ ಬೆಲೆಯೂ ಕಡಿಮೆ ಇರುವುದರಿಂದ ಇದನ್ನು ಹೆಚ್ಚೆಚ್ಚು ಬಳಸುವುದು ಒಳ್ಳೆಯದು. ದೇಹದಲ್ಲಿ ನೀರಿನ ಪ್ರಮಾಣ ಹೆಚ್ಚಿಸುವ ಕಲ್ಲಂಗಡಿಯಲ್ಲಿ ಅನೇಕ ಔಷಧೀಯ ಗುಣಗಳು ಕೂಡ ಇವೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮೂತ್ರ ವಿಸರ್ಜನೆಯ ಸಮಯದಲ್ಲಿ ಉರಿಯು (ಉರಿಮೂತ್ರ ತೊಂದರೆ) ಕಂಡುಬಂದರೆ, ಕಲ್ಲಂಗಡಿ ಹಣ್ಣಿನ ರಸವನ್ನು ಮಜ್ಜಿಗೆಯ ಜೊತೆ ಸಮನಾಗಿ ಸೇರಿಸಿ, ಅದಕ್ಕೆ ಸ್ವಲ್ಪ ಉಪ್ಪು ಸೇರಿಸಿ ಕುಡಿಯುವುದರಿಂದ ತೊಂದರೆಯು ಗುಣವಾಗುತ್ತದೆ.

ಒಂದು ಬಟ್ಟಲು ಕಲ್ಲಂಗಡಿ ಹಣ್ಣಿನ ರಸಕ್ಕೆ ಒಂದು ನಿಂಬೆ ಹಣ್ಣಿನ ರಸವನ್ನು ಸೇರಿಸಿ ಸೇವಿಸುವುದರಿಂದ ಜಲಾಂಶದ ಕೊರತೆಯು ನಿವಾರಣೆಯಾಗುತ್ತದೆ.

ಮಲಬದ್ಧತೆಯ ತೊಂದರೆ ಇರುವವರು ಕಲ್ಲಂಗಡಿ ಹಣ್ಣು ಹಾಗೂ ಕಲ್ಲಂಗಡಿ ಹಣ್ಣಿನ ಜ್ಯೂಸನ್ನು ಸೇವಿಸುವುದರಿಂದ ತೊಂದರೆಯು ಕಡಿಮೆಯಾಗುತ್ತದೆ.

For Latest News Updates, Join Our Whatsapp Community🚩
RELATED ARTICLES

Most Popular