HomeHealthಇಲ್ಲಿದೆ ನೆಗಡಿ - ಜ್ವರಕ್ಕೆ ಮನೆ ಮದ್ದು

ಇಲ್ಲಿದೆ ನೆಗಡಿ – ಜ್ವರಕ್ಕೆ ಮನೆ ಮದ್ದು

ಹವಾಮಾನ ಬದಲಾದಾಗ ನೆಗಡಿ, ಜ್ವರ ಸಾಮಾನ್ಯ. ಅನೇಕರಿಗೆ ನೆಗಡಿ ಸಮಸ್ಯೆ ಕಾಡ್ತಾ ಇದೆ. ಮಾರುಕಟ್ಟೆಯಲ್ಲಿ ಇದರ ನಿಯಂತ್ರಣಕ್ಕೆ ಸಾಕಷ್ಟು ಎಂಟಿಬಯೋಟಿಕ್ ಮಾತ್ರೆಗಳು ಸಿಗುತ್ವೆ. ಆದ್ರೆ ಅದರ ಸೇವನೆಯಿಂದ ಅಡ್ಡ ಪರಿಣಾಮಗಳಾಗುತ್ತವೆ. ಚಿಕ್ಕ ನೆಗಡಿಗೆ ವೈದ್ಯರ ಬಳಿ ಹೋಗೋದು ಕಷ್ಟ. ಮನೆ ಮದ್ದಿನ ಮೂಲಕ ಎರಡೇ ದಿನದಲ್ಲಿ ನೆಗಡಿ- ಜ್ವರವನ್ನು ಕಡಿಮೆ ಮಾಡಿಕೊಳ್ಳಬಹುದು.

ಈ ಮನೆ ಮದ್ದು ಮಾಡೋದು ಸುಲಭ. ಮೊದಲು ಕತ್ತರಿಸಿದ ಅರ್ಧ ಈರುಳ್ಳಿ, 4-5 ಬೆಳ್ಳುಳ್ಳಿ ಹಾಗೂ ಎರಡು ಚಮಚ ನಿಂಬೆ ರಸವನ್ನು ಮಿಕ್ಸಿ ಮಾಡಿಕೊಳ್ಳಿ. ನಂತ್ರ ಎರಡು ಗ್ಲಾಸ್ ನೀರನ್ನು ಕುದಿಸಿಕೊಳ್ಳಿ. ಇದಕ್ಕೆ ಈರುಳ್ಳಿ, ಬೆಳ್ಳುಳ್ಳಿ ಮಿಶ್ರಣವನ್ನು ಸೇರಿಸಿ ಸ್ವಲ್ಪ ಹೊತ್ತು ಬಿಸಿ ಮಾಡಿ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬೆಳಗ್ಗೆ ಹಾಗೂ ರಾತ್ರಿ ಊಟದ ನಂತ್ರ ಇದನ್ನು ಸೇವನೆ ಮಾಡುವುದರಿಂದ ನಿಮಗೆ ಹಿತವೆನಿಸುತ್ತದೆ. ಈ ಔಷಧಿ, ಜ್ವರ ಹಾಗೂ ನೆಗಡಿಯನ್ನು  ಕಡಿಮೆ ಮಾಡುತ್ತದೆ. ಶೀತದ ವಿರುದ್ಧ ಹೋರಾಡುವ ನೈಸರ್ಗಿಕ ಔಷಧಿ ಇದು. ಇದರ ಸೇವನೆಯಿಂದ ಕೆಮ್ಮು- ಕಫ ಕಡಿಮೆಯಾಗಿ ಉಸಿರಾಟದ ಸಮಸ್ಯೆಯಿಂದಲೂ ಮುಕ್ತಿ ಸಿಗುತ್ತದೆ.

For Latest News Updates, Join Our Whatsapp Community🚩
RELATED ARTICLES

Most Popular