HomeLatest Newsಸದಾ ಆರೋಗ್ಯದಿಂದಿರಲು ಇಲ್ಲಿದೆ ʼಟಿಪ್ಸ್ʼ

ಸದಾ ಆರೋಗ್ಯದಿಂದಿರಲು ಇಲ್ಲಿದೆ ʼಟಿಪ್ಸ್ʼ

ಆಧುನಿಕ ಜೀವನಶೈಲಿ, ಒತ್ತಡ, ಆಹಾರ ಕ್ರಮಗಳು ಇವೇ ಮೊದಲಾದ ಕಾರಣಗಳಿಂದ ಅನೇಕರಿಗೆ ಆರೋಗ್ಯವನ್ನು ಕಾಪಾಡಿಕೊಳ್ಳುವುದೇ ಚಿಂತೆಯಾಗಿದೆ.

ಯಾವುದನ್ನೂ ಅತಿಯಾಗಿ ತಿನ್ನುವಂತಿಲ್ಲ. ತಿನ್ನದಿದ್ದರೆ ಮನಸ್ಸು ಒಪ್ಪಲ್ಲ, ಆರೋಗ್ಯದ ಕುರಿತಾಗಿ ಯಾರು ಏನು ಹೇಳಿದರೂ, ಅದನ್ನು ಅನುಸರಿಸುವುದೇ ಕೆಲಸವಾಗಿಟ್ಟಿದೆ ಕೆಲವರಿಗೆ.

ಇನ್ನು ಆರೋಗ್ಯದ ಚಿಂತೆ ಬಿಡಿ. ಸದಾ ಆರೋಗ್ಯವಾಗಿರಲು ಒಂದಿಷ್ಟು ಸಲಹೆ ಇಲ್ಲಿದ್ದು, ಅವನ್ನು ಅನುಸರಿಸಿ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹೆಚ್ಚಾಗಿ ಸಾವಯವ ಆಹಾರ ಪದಾರ್ಥಗಳನ್ನು ಬಳಸಿ. ತಾಜಾ ಹಾಗೂ ಶುದ್ಧವಾದ ತರಕಾರಿ, ಹಣ್ಣುಗಳನ್ನು ಸೇವಿಸಿರಿ. ಮಾಂಸಹಾರ ಬಳಸುವಾಗ, ಚೆನ್ನಾಗಿ ಬೇಯಿಸಿರಿ. ಆದಷ್ಟು ಪೌಷ್ಠಿಕಾಂಶ ಹೆಚ್ಚಾಗಿರುವ ಮತ್ತು ಕೊಬ್ಬು ಕಡಿಮೆ ಇರುವ ಪದಾರ್ಥಗಳನ್ನು ಸೇವಿಸಿರಿ.

ನಿತ್ಯದ ಜೀವನ ಕ್ರಮಗಳಲ್ಲಿ ಸರಳ ವ್ಯಾಯಾಮ, ನಡಿಗೆ, ನೀರು ಕುಡಿಯುವ ಅಭ್ಯಾಸ ರೂಢಿಸಿಕೊಳ್ಳಿ. ಇವೇ ಮೊದಲಾದ ಕ್ರಮಗಳನ್ನು ಅನುಸರಿಸಿದಲ್ಲಿ ಆರೋಗ್ಯಯುತ ಜೀವನ ನಿಮ್ಮದಾಗುತ್ತದೆ ಎನ್ನುತ್ತಾರೆ ತಜ್ಞರು.

For Latest News Updates, Join Our Whatsapp Community🚩
RELATED ARTICLES

Most Popular