ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಇಲ್ಲಿದೆ ಸೂಪರ್ ಟಿಪ್ಸ್

ರೋಗ ನಿರೋಧಕ ಶಕ್ತಿ ಇಲ್ಲದಿದ್ದರೆ ಬೇಗನೆ ಕಾಯಿಲೆಗಳು ನಮ್ಮ ದೇಹದ ಮೇಲೆ ಆಕ್ರಮಣ ಮಾಡುತ್ತದೆ. ಜಂಕ್ ಫುಡ್, ಸಾಫ್ಟ್ ಡ್ರಿಂಕ್ಸ್ ಗಳನ್ನು ಸೇವಿಸುವುದರ ಬದಲು ವಿಟಮಿನ್, ಪೋಷಕಾಂಶಗಳು ಹೆಚ್ಚಿರುವ ಆಹಾರವನ್ನು ಸೇವಿಸಿದರೆ ನಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ.

ಸುಲಭವಾಗಿ ಹೇಗೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು ಎಂಬುದಕ್ಕೆ ಇಲ್ಲಿದೆ ನೋಡಿ ಮಾಹಿತಿ.

ಒಂದು ಗ್ಲಾಸ್ ಉಗುರು ಬೆಚ್ಚಗಿನ ಹಾಲಿಗೆ ¼ ಟೀ ಸ್ಪೂನ್ ಕಾಳುಮೆಣಸಿನ ಪುಡಿ, ¼ ಟೀ ಸ್ಪೂನ್ ಜೀರಿಗೆ ಪುಡಿ, ¼ ಟೀ ಸ್ಪೂನ್ ಅರಿಶಿನಪುಡಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ರಾತ್ರಿ ಊಟವಾಗಿ ಅರ್ಧ ಗಂಟೆ ಆದ ನಂತರ ಇದನ್ನು ಕುಡಿದರೆ ರೋಗ ನಿರೋಧಕ ಶಕ್ತಿ ಹೆಚ್ಛಾಗುತ್ತದೆ. ವಾರದಲ್ಲಿ ಮೂರು ದಿನ ಇದನ್ನು ಕುಡಿದರೆ ಒಳ್ಳೆಯದು.

ತುಳಸಿ ಎಲೆ-15, ಕಾಳು ಮೆಣಸು-6 ಕಾಳು, ¼ ಇಂಚು ಶುಂಠಿ ತೆಗೆದುಕೊಳ್ಳಿ. ಮೊದಲಿಗೆ ತುಳಸಿ ಎಲೆಯನ್ನು ಚೆನ್ನಾಗಿ ತೊಳೆಯಿರಿ. ನಂತರ ಗ್ಯಾಸ್ ಮೇಲೆ ಒಂದು ಪಾತ್ರೆ ಇಟ್ಟು ಅದಕ್ಕೆ ತೊಳೆದಿಟ್ಟುಕೊಂಡ ತುಳಸಿಎಲೆ, ಕಾಳುಮೆಣಸು, ಜಜ್ಜಿಕೊಂಡ ಶುಂಠಿ ಹಾಕಿ 10 ನಿಮಿಷ ಕುದಿಸಿಕೊಳ್ಳಿ. ನಂತರ ಇದನ್ನು ಸೋಸಿಕೊಂಡು ಕುಡಿಯರಿ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read