ಬಿಳಿ ಕೂದಲಿನ ಸಮಸ್ಯೆ ನಿವಾರಣೆಗೆ ಇಲ್ಲಿದೆ ʼಟಿಪ್ಸ್ʼ

ಕಾರ್ಯಕ್ರಮಕ್ಕೆ ತೆರಳುವಾಗ ಪ್ರತಿಯೊಬ್ಬರೂ ಮೇಕಪ್ ಗೆ ಕೊಟ್ಟಷ್ಟೇ ಮಹತ್ವವನ್ನು ತಲೆ ಕೂದಲ ನಿರ್ವಹಣೆಗೂ ಕೊಡುತ್ತಾರೆ. ಅದರಲ್ಲೂ ಬಿಳಿ ಕೂದಲು ಇದ್ದರೆ ಅದನ್ನು ಮರೆಮಾಚುವುದೇ ಸವಾಲಿನ ಕೆಲಸ. ಹೇರ್ ಪ್ಯಾಕ್ ಗಳ ಪೈಕಿ ಇಂಡಿಗೋ ಪುಡಿಯಿಂದ ಕೂದಲನ್ನು ಕಪ್ಪಾಗಿ ಮತ್ತು ಸುಂದರವಾಗಿ ಕಾಣುವಂತೆ ಮಾಡಬಹುದು.

ಎರಡು ಚಮಚ ಇಂಡಿಗೋ ಪುಡಿಯನ್ನು ತೆಗೆದುಕೊಂಡು ಬಿಸಿ ನೀರಿನಿಂದ ಪೇಸ್ಟ್ ತಯಾರಿಸಿ. ಇದನ್ನು ಬಿಳಿಯಾದ ಕೂದಲಿನ ಭಾಗಕ್ಕೆ ಮಾತ್ರ ಹಚ್ಚಿ. ಇದನ್ನು 2 ತಾಸು ಬಿಡಿ. ನಂತರ ತಣ್ಣೀರಿನಿಂದ ತೊಳೆಯಿರಿ, ಮೂರು ದಿನದ ನಂತರ ಕೂದಲಿಗೆ ಸಹಜವಾದ ಕಪ್ಪು ಬಣ್ಣವನ್ನು ಕೊಡುತ್ತದೆ.

ಈ ಪುಡಿಯನ್ನು ತಿಂಗಳಿಗೆ 3 ರಿಂದ 4 ಸಾರಿ ಹಚ್ಚಬಹುದು. ಇಂಡಿಗೋ ಪುಡಿಯನ್ನು ಖರೀದಿಸುವಾಗ ನೈಸರ್ಗಿಕವಾದ ಇಂಡಿಗೋ ಪುಡಿಯನ್ನೇ ಬಳಸಿ. ರಾಸಾಯನಿಕಗಳಿಂದ ಕೂಡಿದ ಪುಡಿಯನ್ನು ಬಳಸದಿರಿ. ಇದರಿಂದ ಅಡ್ಡ ಪರಿಣಾಮಗಳು ಕಾಣಿಸಿಕೊಂಡಾವು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read