ʼಜಗನ್ನಾಥʼ ನಿಗೆ ಕೋಳಿ ನಮಸ್ಕರಿಸಿದ ದೃಶ್ಯ ವೈರಲ್ | Watch Video

ಜಪಾನ್‌ನಲ್ಲಿ ಪ್ರಾಣಿಗಳು ಪ್ರವಾಸಿಗರಿಗೆ ನಮಸ್ಕರಿಸಿದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಸಖತ್ ವೈರಲ್ ಆಗಿದ್ದ ಬೆನ್ನಲ್ಲೇ ಇದೀಗ ಮತ್ತೊಂದು ಅದ್ಭುತ ದೃಶ್ಯ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಒಡಿಶಾದಲ್ಲಿರುವ ಒಂದು ಸ್ಥಳದಲ್ಲಿ ಜಗನ್ನಾಥ ದೇವರ ವಿಗ್ರಹಕ್ಕೆ ಕೋಳಿ ನಮಸ್ಕರಿಸಿದ ದೃಶ್ಯ ಇದು.

ಈ ಅಪರೂಪದ ದೃಶ್ಯವನ್ನು ಯಾರೋ ಚಿತ್ರೀಕರಿಸಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದು, ಇದು ಈಗ ವೈರಲ್ ಆಗಿದೆ. ಕೋಳಿ ಜಗನ್ನಾಥ ದೇವರ ವಿಗ್ರಹದ ಮುಂದೆ ತಲೆ ಬಾಗಿಸಿ ನಮಸ್ಕರಿಸುತ್ತಿರುವ ದೃಶ್ಯವು ಅನೇಕರ ಮನಸ್ಸನ್ನು ಗೆದ್ದಿದೆ.

ಜಗನ್ನಾಥ ದೇವರ ಭಕ್ತರು ತಮ್ಮ ದೇವರ ಮೇಲಿನ ಅಪಾರ ಭಕ್ತಿಯಿಂದಾಗಿ ಈ ದೃಶ್ಯವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ಈ ವಿಡಿಯೋದಲ್ಲಿ ಜಗನ್ನಾಥ ದೇವರ ವಿಗ್ರಹವನ್ನು ಒಂದು ಎತ್ತರದ ವೇದಿಕೆಯ ಮೇಲೆ ಇರಿಸಿ ಪೂಜಿಸಲಾಗಿದೆ. ವಿಗ್ರಹವನ್ನು ಎಲೆಗಳು ಮತ್ತು ಹೂವುಗಳಿಂದ ಅಲಂಕರಿಸಲಾಗಿದೆ. ಈ ವೇಳೆ ಕೋಳಿ ಬಂದು ವಿಗ್ರಹದ ಮುಂದೆ ತಲೆ ಬಾಗಿಸುತ್ತಿದೆ. ಈ ದೃಶ್ಯವು ಜಗನ್ನಾಥ ದೇವರ ಆಶೀರ್ವಾದವನ್ನು ಪಡೆಯಲು ಕೋಳಿ ಪ್ರಾರ್ಥಿಸುತ್ತಿರುವಂತೆ ಕಾಣುತ್ತಿದೆ.

ಈ ವಿಡಿಯೋವನ್ನು ‘ಜಗನ್ನಾಥ ಧಾಮ್ ಪುರಿ ಎಕ್ಸ್ಪರ್ಟ್’ ಎಂಬ ಇನ್ಸ್ಟಾಗ್ರಾಂ ಖಾತೆಯಲ್ಲಿ ಅಪ್‌ಲೋಡ್ ಮಾಡಲಾಗಿದೆ. ನಂತರ ಅನೇಕರು ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read